ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಸೋತಿರುವ ಟೀಂ ಇಂಡಿಯಾ ಈಗ ಎರಡನೇ ಟೆಸ್ಟ್ ಪಂದ್ಯದಲ್ಲೂ ಸೋಲುವ ಭೀತಿಯಲ್ಲಿದೆ.
ಇಂದು ಮೂರನೇ ದಿನದಂತ್ಯಕ್ಕೆ ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೇ 26 ರನ್ ಗಳಿಸಿದೆ. ಮೊದಲ ಇನಿಂಗ್ಸ್ ನಲ್ಲಿ ಆಫ್ರಿಕಾ 489 ರನ್ ಗಳಿಸಿದ್ದರೆ ಭಾರತ ಕೇವಲ 201 ರನ್ ಗೆ ಆಲೌಟ್ ಆಗಿತ್ತು. ಇದರೊಂದಿಗೆ ಆಫ್ರಿಕಾ 288 ರನ್ ಗಳ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತ್ತು.
ಅದೃಷ್ಟವಶಾತ್ ಇಂದು ಆಪ್ರಿಕಾಗೆ ಭಾರತದ ಮೇಲೆ ಫಾಲೋ ಆನ್ ಹೇರುವ ಅವಕಾಶವಿದ್ದರೂ ಹೇರಲಿಲ್ಲ. ಎರಡನೇ ಇನಿಂಗ್ಸ್ ನಲ್ಲಿ ಆಫ್ರಿಕಾ ಉತ್ತಮ ಬ್ಯಾಟಿಂಗ್ ಮಾಡುತ್ತಿದೆ. ಭಾರತದ ಈ ಹೀನಾಯ ಪ್ರದರ್ಶನಕ್ಕೆ ಸಂಯೋಜನೆಯಿಲ್ಲದ ಬ್ಯಾಟಿಂಗ್ ಕಾರಣ ಎನ್ನಬಹುದು.
ಇದೀಗ ಪಂದ್ಯದಲ್ಲಿ ಎರಡೇ ದಿನ ಬಾಕಿಯಿದೆ. ನಾಳೆ ಮಧ್ಯಾಹ್ನದ ಅವಧಿವರೆಗೆ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡಿದರೂ ಭಾರತದ ಮುಂದೆ ಬೃಹತ್ ಮೊತ್ತದ ಗುರಿಯಿರಲಿದೆ. ಹೀಗಾಗಿ ಮುಂದೆ ಒಂದೂವರೆ ದಿನದಷ್ಟು ಭಾರತ ಎರಡನೇ ಇನಿಂಗ್ಸ್ ಆಲೌಟ್ ಆಗದೇ ನಿಭಾಯಿಸುವುದು ಕಷ್ಟವಾಗಲಿದೆ. ಇದರೊಂದಿಗೆ ಟೀಂ ಇಂಡಿಯಾ ಈಗ ವೈಟ್ ವಾಶ್ ಅವಮಾನದ ಭೀತಿಯಲ್ಲಿದೆ.