Select Your Language

Notifications

webdunia
webdunia
webdunia
webdunia

IND vs SA: ಕೊಹ್ಲಿ, ರೋಹಿತ್ ಇಲ್ಲದ ಟೀಂ ಇಂಡಿಯಾ ಟೆಸ್ಟ್ ಮ್ಯಾಚ್ ನೋಡೋರೇ ಇಲ್ಲ

Guwahati ground
Photo Credit: X
ಗುವಾಹಟಿ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಲ್ಲದ ಮೇಲೆ ಟೀಂ ಇಂಡಿಯಾ ಟೆಸ್ಟ್ ಪಂದ್ಯವನ್ನು ನೋಡೋರೇ ಇಲ್ಲ ಎಂಬ ಸ್ಥಿತಿಯಾಗಿದೆ. ಗುವಾಹಟಿಯಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ವೀಕ್ಷಕರೇ ಇಲ್ಲ.

ಮೊದಲೇ ಸ್ಟಾರ್ ಆಟಗಾರರಿಲ್ಲ. ಇದರ ಮೇಲೆ ಇತ್ತೀಚೆಗೆ ಟೆಸ್ಟ್ ಮಾದರಿಯಲ್ಲಿ ಟೀಂ ಇಂಡಿಯಾ ಪ್ರದರ್ಶನ ಕಳಪೆಯಾಗಿದೆ. ಈ ಪಂದ್ಯಕ್ಕೆ ನಾಯಕ ಶುಭಮನ್ ಗಿಲ್ ಕೂಡಾ ಇಲ್ಲ. ಎಲ್ಲಾ ಯುವ ಕ್ರಿಕೆಟಿಗರ ದಂಡು. ಹೀಗಾಗಿ ಟೆಸ್ಟ್ ಮ್ಯಾಚ್ ನೋಡುವ ಆಸಕ್ತಿಯೇ ಜನರಿಗಿಲ್ಲ.

ಮೊದಲ ಟೆಸ್ಟ್ ನಡೆದಿದ್ದ ಕೋಲ್ಕತ್ತಾ ಮೈದಾನದಲ್ಲೂ ಹೆಚ್ಚು ಪ್ರೇಕ್ಷಕರಿರಲಿಲ್ಲ. ಇಂದಿನ ಪಂದ್ಯದಲ್ಲೂ ಗ್ಯಾಲರಿಯಲ್ಲಿ ಪ್ರೇಕ್ಷಕರಿಲ್ಲದೇ ಬಣಗುಡುತ್ತಿದೆ. ಒಂದು ಕಾಲದಲ್ಲಿ ಕ್ರಿಕೆಟ್ ಎಂದರೆ ಮತ್ತೊಂದು ಧರ್ಮವೆಂಬಂತೆ ಜನ ಮೈದಾನಕ್ಕೆ ನುಗ್ಗುತ್ತಿದ್ದರು.

ಆದರೆ ಇತ್ತೀಚೆಗೆ ಸ್ಟಾರ್ ಆಟಗಾರರ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಿವೃತ್ತಿಯಾದ ಮೇಲೆ ಜನರಿಗೆ ಮೊದಲಿನ ಆಸಕ್ತಿಯಿದ್ದಂತಿಲ್ಲ. ಒಟಿಟಿಟಯಲ್ಲೂ ವೀಕ್ಷಕರ ಸಂಖ್ಯೆ 5 ಕೋಟಿ  ಮೀರುತ್ತಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

IND vs SA: ಕ್ಯಾಪ್ಟನ್ ಬದಲಾದರೂ ಟೀಂ ಇಂಡಿಯಾದ ಟಾಸ್ ಅದೃಷ್ಟ ಮಾತ್ರ ಬದಲಾಗಿಲ್ಲ