ಗುವಾಹಟಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗುತ್ತಿದ್ದು, ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕನಾಗುವ ಮೂಲಕ ರಿಷಭ್ ಪಂತ್ ಹೊಸ ದಾಖಲೆ ಮಾಡಲಿದ್ದಾರೆ.
ಇಂದು ಗುವಾಹಟಿ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಟೀಂ ಇಂಡಿಯಾ ಖಾಯಂ ನಾಯಕ ಶುಭಮನ್ ಗಿಲ್ ಕತ್ತು ನೋವಿನಿಂದಾಗಿ ಈ ಪಂದ್ಯದಲ್ಲಿ ಆಡುತ್ತಿಲ್ಲ. ಹೀಗಾಗಿ ರಿಷಭ್ ಪಂತ್ ರನ್ನು ನಾಯಕನಾಗಿ ನೇಮಿಸಲಾಗಿದೆ.
ಕಳೆದ ಪಂದ್ಯದಲ್ಲೂ ಗಿಲ್ ಮೊದಲ ದಿನವೇ ಗಾಯದಿಂದಾಗಿ ಮೈದಾನ ತೊರೆದಿದ್ದರು. ಹೀಗಾಗಿ ಇಡೀ ಪಂದ್ಯದಲ್ಲಿ ಉಪನಾಯಕನಾಗಿದ್ದ ರಿಷಭ್ ಪಂತ್ ಅವರೇ ನಾಯಕನ ಪಾತ್ರ ನಿಭಾಯಿಸಿದ್ದರು. ಆದರೆ ಇಂದು ಅವರು ಪೂರ್ಣಪ್ರಮಾಣದ ನಾಯಕನಾಗಿರಲಿದ್ದಾರೆ.
ಈ ಮೂಲಕ ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಬಳಿಕ ಅಪರೂಪದ ದಾಖಲೆಯೊಂದನ್ನು ಮಾಡಲಿದ್ದಾರೆ. ಭಾರತ ತಂಡವನ್ನು ಅಂಡರ್ 19 ಮತ್ತು ಐಪಿಎಲ್ ಬಳಿಕ ಟೀಂ ಇಂಡಿಯಾ ಟೆಸ್ಟ್ ಮಾದರಿಯಲ್ಲಿ ನಾಯಕನಾಗಿ ಮುನ್ನಡೆಸುವ ದಾಖಲೆಯನ್ನು ಅವರು ಮಾಡಲಿದ್ದಾರೆ. ಇದಕ್ಕೆ ಮೊದಲು ದ್ರಾವಿಡ್ ಮತ್ತು ಕೊಹ್ಲಿ ಮಾತ್ರ ಈ ದಾಖಲೆ ಮಾಡಿದ್ದರು. ಇದೀಗ ರಿಷಭ್ ಅವರ ಸಾಲಿಗೆ ಸೇರ್ಪಡೆಯಾಗಲಿದ್ದಾರೆ.