ಕ್ರಿಕೆಟರ್ ಸ್ಮೃತಿ ಮಂಧಾನ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಈಚೆಗೆ ಬಾವಿ ಪತ್ನಿಗೆ ರೋಮ್ಯಾಂಟಿಕ್ ಆಗಿ ಪ್ರಮೋಸ್ ಮಾಡಿದ ಪಲಾಶ್ ಮುಚ್ಚಲ್ ಅವರು ಕೈ ಗೆ ರಿಂಗ್ ತೊಡಿಸಿ ತಮ್ಮ ಪ್ರೀತಿಯನ್ನು ತೋರ್ಪಡಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದರ ಬೆನ್ನಲ್ಲೇ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸ್ಮೃತಿ ಮಂಧಾನ ಮನೆಯಲ್ಲಿ ಹಲ್ದಿ ಸಂಭ್ರಮ ನಡೆದಿದೆ. ಈ ಸಂಭ್ರಮದಲ್ಲಿ ಅವರ ಸಹ ಆಟಗಾರ್ತಿಯರ ಕೂಡಾ ಕುಣಿದು ಸಂಭ್ರಮಿಸಿದ್ದಾರೆ.
ಶಫಾಲಿ ವರ್ಮಾ, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ರೇಣುಕಾ ಸಿಂಗ್, ಶಿವಾಲಿ ಶಿಂಧೆ, ರಾಧಾ ಯಾದವ್ ಮತ್ತು ಜೆಮಿಮಾ ರಾಡ್ರಿಗಸ್ ಅವರು ಡ್ಯಾನ್ಸ್ ಫ್ಲೋರ್‌ನಲ್ಲಿ ಅವರೊಂದಿಗೆ ಸೇರಿಕೊಂಡರು. ಎಲ್ಲರೂ ಹಳದಿ ಬಣ್ಣದಲ್ಲಿ ಮಿಂಚಿದರು.
ಸ್ಮೃತಿ ಮಂಧಾನ ಅವರು ಪಾಲಾಶ್ ಮುಚ್ಚಲ್ ಅವರೊಂದಿಗೆ ತಮ್ಮ ನಿಶ್ಚಿತಾರ್ಥವನ್ನು ಗುರುವಾರ ವಿನೋದ ಮತ್ತು ಉಲ್ಲಾಸಕರ ರೀತಿಯಲ್ಲಿ ದೃಢಪಡಿಸಿದರು. ತಮ್ಮ ಭಾರತ ತಂಡದ ಸಹ ಆಟಗಾರರೊಂದಿಗೆ ಉತ್ಸಾಹಭರಿತ ನೃತ್ಯವನ್ನು ಒಳಗೊಂಡ ತಮಾಷೆಯ Instagram ರೀಲ್ ಅನ್ನು ಹಂಚಿಕೊಂಡಿದ್ದಾರೆ.
ಶುಕ್ರವಾರ, ಪಲಾಶ್ ಅವರು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಆಕೆಗೆ ಹೇಗೆ ಪ್ರಪೋಸ್ ಮಾಡಿದರು ಎಂಬುದನ್ನು ತೋರಿಸುವ ಹೃದಯಸ್ಪರ್ಶಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಭಾರತವು ಮಹಿಳಾ ವಿಶ್ವಕಪ್ ಅನ್ನು ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ, ಟ್ರೋಪಿಯನ್ನು ಎತ್ತಿದ ಬೆನ್ನಲ್ಲೇ ಸ್ಮೃತಿ ದಾಂಪತ್ಯ ಜೀವನಕ್ಕಿಡಲು ಸಜ್ಜಾಗಿದ್ದಾರೆ.