ಗುವಾಹಟಿ: ದಕ್ಷಿಣ ಆಫ್ರಿಕಾ ತಂಡದ ಬಾಲಂಗೋಚಿಗಳ ಬ್ಯಾಟಿಂಗ್ ಅಬ್ಬರಕ್ಕೆ ಭಾರತದ ಬೌಲರ್‌ಗಳು ಬಳಲಿ ಬೆಂಡಾದರು. ಸೆನುರನ್ ಮುತ್ತುಸಾಮಿ ಶತಕ ಮತ್ತು ಮಾರ್ಕೊ ಯಾನ್ಸನ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಬೃಹತ್ ಮೊತ್ತ ಕಲೆಹಾಕಿದೆ.
ಗುವಹಾಟಿ ನಡೆಯುತ್ತಿರುವ ಭಾರತ ವಿರುದ್ಧದ 2ನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾವು 489 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದೆ. ಎರಡನೇ ದಿನದಾಟದ ಮೂರನೇ ಅವಧಿಯಲ್ಲಿ ಆಫ್ರಿಕಾ ತಂಡ ಆಲೌಟ್ ಆಗಿದೆ.
ತಂಡದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಉಪಯುಕ್ತ ಕಾಣಿಕೆಯ ಬೆನ್ನಲ್ಲೇ ಮಧ್ಯಮ ಕ್ರಮಾಂಕದ ಸೆನುರನ್ ಮುತ್ತುಸಾಮಿ ಶತಕ(109) ಸಿಡಿಸಿದರೆ,, ಬಿರುಸಿನ ಬ್ಯಾಟಿಂಗ್ ಮಾಡಿದ ಮಾರ್ಕೊ ಜಾನ್‌ಸೆನ್ 93 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಏಡನ್ ಮರ್ಕರಂ(38), ರಿಕಲ್ಟನ್ (35), ಟ್ರಿಸ್ಟನ್ ಸ್ಟಬ್ಸ್(49), ನಾಯಕ ತೆಂಬಾ ಬವುಮಾ(41) ತಂಡಕ್ಕೆ ನೆರವಾದರು.
ಭಾರತದ ಪರ ಕುಲ್ದೀಪ್ ಯಾದವ್ 115 ರನ್ ನೀಡಿ 4 ವಿಕೆಟ್ ಉರುಳಿಸಿದರೆ, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು.
ಮೊದಲ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ ಎರಡನೇ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 9 ರನ್ ಗಳಿಸಿದೆ. 7 ರನ್ ಗಳಿಸಿರುವ ಯಶಸ್ವಿ ಜೈಸ್ವಾಲ್ ಮತ್ತು 2 ರನ್ ಗಳಿಸಿರುವ ಕೆ.ಎಲ್. ರಾಹುಲ್ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.