ಭಾರತದ ಟೆಸ್ಟ್ ನಾಯಕರಾದ ಮೇಲೆ ವಿರಾಟ್ ಕೊಹ್ಲಿ ತಪ್ಪು ಹೆಜ್ಜೆಯನ್ನು ಇಟ್ಟಿಲ್ಲ. ಮುಂಚೂಣಿಯಲ್ಲಿ ನಿಂತು ಶ್ರೀಲಂಕಾ, ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಈಗ ವಿಂಡೀಸ್ ತಂಡವನ್ನು ಸೋಲಿಸುವ ಸನಿಹದಲ್ಲಿದ್ದಾರೆ. ಕಿಂಗ್‌ಸ್ಟನ್‌ನಲ್ಲಿ ನಾಲ್ಕನೇ ದಿನ ವಾಷ್‌ಔಟ್ ಆದ ಬಳಿಕ, ವಿರಾಟ್ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂಗೆ ಸ್ಮರಣೀಯ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.
ಚಿತ್ರದಲ್ಲಿ ವಿರಾಟ್ ಮತ್ತು ಕೆಲವು ಯುವ ಕ್ರಿಕೆಟಿಗರು ರಾಹುಲ್ ದ್ರಾವಿಡ್ ಜತೆಗಿದ್ದು, ಆ ಸಂದರ್ಭದಲ್ಲಿ ರಾಹುಲ್ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದರು. ವಿರಾಟ್ ಜೂನಿಯರ್ ಕ್ರಿಕೆಟರ್ ಆಗಿದ್ದಾಗ 10 ವರ್ಷಗಳ ಹಿಂದೆ ತೆಗೆದ ಚಿತ್ರವಾಗಿತ್ತು.
ಇಂತಹ ಕ್ಷಣಗಳು ನಿಮ್ಮನ್ನು ನಂಬುವಂತೆ ಮಾಡುತ್ತದೆ. ಈ ಲೆಜೆಂಡ್ ಜತೆ ನಾನು ಒಂದೊಮ್ಮೆ ಕಣ್ಣಿನ ಸಂಪರ್ಕ ಹೊಂದಲು ಪ್ರಯತ್ನಿಸಿದ್ದೆ. ಬಳಿಕ ಅದೇ ಲೆಜೆಂಡ್ ಟೆಸ್ಟ್ ಕ್ರಿಕೆಟ್ ಆಡುವಾಗ ನನ್ನ ಸಂದರ್ಶನ ಮಾಡಿದರು. ಕನಸುಗಳು ನಿಜವಾಗುತ್ತದೆಂದು ನಾನು ಊಹಿಸಿದ್ದೇನೆ. ಸದಾ ನಿಮ್ಮ ಮೇಲೆ ನೀವು ನಂಬಿಕೆ ಇರಿಸುವುದನ್ನು ಮಾತ್ರ ನೀವು ಮಾಡಿ ಎಂದು ಕೊಹ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅವರ ಪೋಸ್ಟ್ ಅನೇಕ ಭರವಸೆಯ ಕ್ರಿಕೆಟರುಗಳಿಗೆ ಪ್ರೇರಣೆಯಾಗಿದೆ. ದೆಹಲಿ ಯುವಕ 10 ವರ್ಷಗಳ ಅವಧಿಯಲ್ಲೇ ಭಾರತದ ಕ್ರಿಕೆಟ್‌ನ ಪ್ರಖ್ಯಾತ ಆಟಗಾರರಾಗಿ ಹೊರಹೊಮ್ಮಿದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ