ಗಾರ್‌ಫೀಲ್ಡ್ ಸೋಬರ್ಸ್ ಅವರ 80ನೇ ಹುಟ್ಟುಹಬ್ಬದಂದು ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಮತ್ತು ಬಳಗ ಶುಭ ಹಾರೈಸಿದ್ದಾರೆ. ಲೆಜೆಂಡರಿ ವೆಸ್ಟ್ ಇಂಡೀಸ್ ಕ್ರಿಕೆಟರ್‌ನನ್ನು ಭೇಟಿ ಮಾಡುವ ಇಚ್ಛೆಯನ್ನು ವಿರಾಟ್ ಕೊಹ್ಲಿ ವ್ಯಕ್ತಪಡಿಸಿದರು. ಮೈದಾನದಲ್ಲಿ ನೀವು ನೀಡುತ್ತಿದ್ದ ಪ್ರದರ್ಶನ ಸದಾ ಶ್ರೇಷ್ಟವಾಗಿದ್ದು, ಆಟವನ್ನು ಬದಲಿಸಿದ ಕೆಲವೇ ಮಂದಿಯಲ್ಲಿ ನೀವೊಬ್ಬರು.
ಅದ್ಭುತ ವೃತ್ತಿಜೀವನಕ್ಕಾಗಿ ಅಭಿನಂದನೆಗಳು. ನಿಮ್ಮ 80ನೇ ಜನ್ಮದಿನಾಚರಣೆಯಂದು ಶುಭ ಹಾರೈಸುವುದು ನನಗೆ ಸಂತಸವಾಗುತ್ತದೆ ಎಂದು ವೆಸ್ಟ್ ಇಂಡೀಸ್ ಪೋಸ್ಟ್ ಮಾಡಿದ ವಿಡಿಯೊ ಸಂದೇಶದಲ್ಲಿ ಕೊಹ್ಲಿ ಹೇಳಿದ್ದಾರೆ.
ನಿಮ್ಮನ್ನು ಜಗತ್ತಿನಲ್ಲಿ ಭೇಟಿ ಮಾಡಿದವರಿಗೆಲ್ಲ ಸ್ಫೂರ್ತಿ ತುಂಬುತ್ತೀರೆಂಬ ಖಾತ್ರಿ ನನಗಿದೆ. ನಿಮ್ಮ ಆಟವನ್ನು ನೋಡುವುದು ಸಂತಸವುಂಟು ಮಾಡುತ್ತದೆ. ನಾನು ನಿಮ್ಮನ್ನು ಭೇಟಿ ಮಾಡಿ ಆಟದ ಕುರಿತು ಚರ್ಚೆ ನಡೆಸುತ್ತೇನೆ. ಅದು ನನ್ನ ಜೀವನದ ಬಯಕೆಯಾಗಿದೆ. ಗ್ರೇಟ್ ಬರ್ತ್‌ಡೇ ಎಂದು ಕೊಹ್ಲಿ ವಿಷ್ ಮಾಡಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.