ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊಣೆಗಾರಿಕೆ ವಹಿಸಬೇಕು ಎಂದು ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ನಾವು ಎದುರಾಳಿ ಪಕ್ಷದ ಮೇಲೆ ಹೆಚ್ಚು ಗಮನವಹಿಸುವುದಿಲ್ಲ. ಆದರೆ ಇಲ್ಲಿನ ವಿಕೆಟ್ ಬೌನ್ಸ್ ಆಗುತ್ತದೆಂದು ತಿಳಿದು ಸಂತಸವಾಗಿದೆ.
ಆಂಟಿಗಾನಲ್ಲಿ ಕೂಡ ಸಾಕಷ್ಟು ಬೌನ್ಸ್ ಆಗುತ್ತಿದ್ದು, ಜಮೈಕಾ ಇನ್ನೂ ಉತ್ತಮ ಬೌನ್ಸ್ ಆಗುತ್ತದೆ. ಇದೊಂದು ಫಲಿತಾಂಶ ಆಧಾರಿತ ಮೈದಾನವಾಗಿದ್ದು, ನಾವು ಪುಳುಕಿತರಾಗಿದ್ದೇವೆ ಎಂದು ಕೊಹ್ಲಿ ತಿಳಿಸಿದರು.
ವೆಸ್ಟ್ ಇಂಡೀಸ್ ಬೌಲರುಗಳು ಯಾವುದೇ ವೇಗ ಮತ್ತು ಬೌನ್ಸ್ ನಿಭಾಯಿಸಲು ನಮ್ಮ ಬ್ಯಾಟ್ಸ್‌ಮನ್ ಸಮರ್ಥರಿದ್ದಾರೆ. ಮೊದಲ ಪಂದ್ಯದಲ್ಲಿ ತೋರಿಸಿದ ಹಾಗೆ ಸಂಕಲ್ಪ ಮತ್ತು ಗಮನಕೇಂದ್ರೀಕರಿಸಿ ಆಡುವುದು ಯೋಜನೆಯಾಗಿದೆ ಎಂದು ಕೊಹ್ಲಿ ತಿಳಿಸಿದರು.
ಆಂಟಿಗಾದಲ್ಲಿ ಪ್ರದರ್ಶಿಸಿದ್ದಕ್ಕಿಂತ ಹೆಚ್ಚು ಜವಾಬ್ದಾರಿ ಮತ್ತು ಗಮನವನ್ನು ವಹಿಸಬೇಕಾಗಿದೆ.
ಎರಡನೇ ಟೆಸ್ಟ್‌ನ 11 ಮಂದಿಯ ತಂಡದಲ್ಲಿ ಹೆಚ್ಚು ಬದಲಾವಣೆ ಮಾಡದೇ ಹೆಬ್ಬೆರಳು ಗಾಯದಿಂದ ಮುರಳಿ ವಿಜಯ್ ಅವರನ್ನು ಮಾತ್ರ ಕೈಬಿಡಲಾಗಿದ್ದು ಅವರಿಗೆ ಬದಲಿಯಾಗಿ ಲೋಕೇಶ್ ರಾಹುಲ್ ಆಡಲಿದ್ದಾರೆ ಎಂದು ಕೊಹ್ಲಿ ಹೇಳಿದರು.
ನೀವು ರೋಹಿತ್, ಭುವನೇಶ್ವರ್, ಜಡೇಜಾರನ್ನು ಗಮನಿಸುವುದಾದರೆ ಅವರು ವಿಶ್ವ ದರ್ಜೆಯ ಆಟಗಾರರು. ಅವರು ಅಚ್ಚರಿಯ ಕೌಶಲ್ಯದಿಂದ ಕೂಡಿದ್ದಾರೆ. ಶ್ರೇಷ್ಟ 11 ಮಂದಿಯ ತಂಡದೊಂದಿಗೆ ಆಡುತ್ತಿರುವುದು ನಾಯಕನಿಗೆ ಸದಾ ಸಂತಸ ಉಂಟುಮಾಡುತ್ತದೆ. ಇದೇ ಸಂದರ್ಭದಲ್ಲಿ ನಮಗೆ ಆಯ್ಕೆಗಳೂ ಇವೆ ಎಂದು ಕೊಹ್ಲಿ ಹೇಳಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.