ಬಾಂಗ್ಲಾದೇಶದ ಟೆಸ್ಟ್ ಪ್ರಯಾಣವು ಭಂಗಬಂಧು ಸ್ಟೇಡಿಯಂನಲ್ಲಿ ಭಾರತದ ವಿರುದ್ಧ ಒಂದು ಟೆಸ್ಟ್ ಪಂದ್ಯ ಆಡುವುದರೊಂದಿಗೆ 2000ದ ನವೆಂಬರ್ 10ರಂದು ಆರಂಭವಾಯಿತು. 16 ವರ್ಷಗಳಲ್ಲಿ ಅವರು 2005ರಲ್ಲಿ ಜಿಂಬಾಬ್ವೆ ವಿರುದ್ಧ ಸರಣಿ ಜಯ ಸಾಧಿಸಿದ್ದನ್ನು ಬಿಟ್ಟರೆ ಅಂತಹ ಸಾಧನೆಯನ್ನೇನೂ ಮಾಡಿಲ್ಲ.
ಈ ಅವಧಿಯಲ್ಲಿ ಭಾರತವನ್ನು ಹೊರತುಪಡಿಸಿ ಎಲ್ಲಾ ಪ್ರಮುಖ ರಾಷ್ಟ್ರಗಳಲ್ಲಿ ಅವರು ಟೆಸ್ಟ್‌ಗಳನ್ನು ಆಡಿದ್ದಾರೆ. ಆದಾಗ್ಯೂ, 2017ರಲ್ಲಿ ಎಲ್ಲವೂ ಬದಲಾಗಲಿದೆ.
ಬಾಂಗ್ಲಾದೇಶವು ಹೈದರಾಬಾದ್‌ನಲ್ಲಿ ಭಾರತದ ವಿರುದ್ಧ ಒಂದು ಟೆಸ್ಟ್ ಪಂದ್ಯವನ್ನು ಆಡುವುದಾಗಿ ಬಿಸಿಸಿಐ ಪ್ರಕಟಿಸಿದೆ. ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ , ಟೆಸ್ಟ್ ಆಡುವ ಎಲ್ಲಾ ರಾಷ್ಟ್ರಗಳು ಭಾರತಕ್ಕೆ ಬರಲು ಅವಕಾಶನ ನೀಡುವುದು ಮಂಡಳಿಯ ಜವಾಬ್ದಾರಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. ಭಾರತ ಬಾಂಗ್ಲಾದೇಶಕ್ಕೆ ಐದು ಬಾರಿ ಪ್ರವಾಸ ಕೈಗೊಂಡಿದ್ದು, ಒಂದು ಪಂದ್ಯವನ್ನು ಕೂಡ ಇದುವರೆಗೆ ಸೋತಿಲ್ಲ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.