ವಿರಾಟ್ ಕೊಹ್ಲಿ ತಮ್ಮ ಭವ್ಯ ಸ್ಟ್ರೋಕ್‌ಗಳನ್ನು ಮೈದಾನದ ಎಲ್ಲಾ ಕಡೆ ಬಾರಿಸುವ ರೀತಿ ಸಾಮಾಜಿಕ ಜಾಲತಾಣವನ್ನು ಕೂಡ ಬಳಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಹಿಂಬಾಲಕರು ವಿಪುಲ ಸಂಖ್ಯೆಯಲ್ಲಿದ್ದು ಅವರು ತಮ್ಮ ಫ್ಯಾನ್‌ಗಳ ಜತೆ ಆಗಾಗ್ಗೆ ಟ್ವಿಟರ್ ಸಂಭಾಷಣೆ ನಡೆಸುತ್ತಾರೆ.
ಕೊಹ್ಲಿ ಜನಪ್ರಿಯತೆ ಗಡಿಯಾಚೆಗೂ ವಿಸ್ತರಿಸಿದೆ. ಪಾಕಿಸ್ತಾನದ ಅಭಿಮಾನಿಗಳು ಕೂಡ ಭಾರತದ ನಾಯಕನಿಗೆ ತಮ್ಮ ಮೆಚ್ಚಿಗೆ ಸೂಚಿಸಿ ಪಾಕ್ ಅಧಿಕಾರಿಗಳಿಂದ ತೊಂದರೆಗೆ ಸಿಲುಕಿದ್ದರು. ಪಾಕಿಸ್ತಾನದ ವಿರಾಟ್ ಕೊಹ್ಲಿ ಅಭಿಮಾನಿಗಳ ಪಟ್ಟಿಯಲ್ಲಿ ಇನ್ನೊಂದು ಸೇರ್ಪಡೆಯಾಗಿದೆ.
ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರ್ ಅಲೀಮ್ ದರ್ ಪುತ್ರ ಹಸನ್. ಜಗತ್ತಿನ ಅತ್ಯಂತ ಗೌರವಾನ್ವಿತ ಅಂತಾರಾಷ್ಟ್ರೀಯ ಅಂಪೈರ್‌ಗಳಲ್ಲಿ ಒಬ್ಬರಾದ ಧರ್, ವೆಸ್ಟ್ ಇಂಡೀಸ್ -ಭಾರತ ಸರಣಿಯಲ್ಲಿ ಅಂಪೈರಿಂಗ್ ನಿರ್ವಹಿಸಿದ್ದಾರೆ. ಡ್ಯಾಡ್ ಅಲೀಮ್‌ಭಾಯಿ ಕಾರ್ಯಭಾರ ವಹಿಸಿಕೊಂಡ ಪ್ರವಾಸದಲ್ಲಿ ತಮ್ಮನ್ನು ಭೇಟಿ ಮಾಡುವಂತೆ ಕೊಹ್ಲಿ ಹಸನ್‌ಗೆ ಆಹ್ವಾನಿಸಿದ್ದಾರೆ. ಹಸನ್‌ಗೆ ತಮ್ಮ ಹಸ್ತಾಕ್ಷರದ ಬ್ಯಾಟ್ ನೀಡುವುದಾಗಿ ಕೊಹ್ಲಿ ಭರವಸೆ ನೀಡಿದ್ದಾರೆ. ಈ ತಲೆಮಾರಿನ ಶ್ರೇಷ್ಟ ಬ್ಯಾಟ್ಸ್‌ಮನ್‌ನಿಂದ ಬೆಲೆ ಕಟ್ಟಲಾಗದ ಕೊಡುಗೆ ಇದಾಗಿದೆ.
ಪಾಕ್ ವಿರುದ್ಧ ವಿಶ್ವ ಟಿ 20 ಪಂದ್ಯದಲ್ಲಿ ಕೂಡ ಕೊಹ್ಲಿ ತಮ್ಮ ಬ್ಯಾಟ್ ಅನ್ನು ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್‍ಗೆ ಕೊಡುಗೆಯಾಗಿ ನೀಡಿದ್ದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ