ತಮ್ಮ ಚಿತ್ರ ಅನ್‌ಇಂಡಿಯನ್ ಪ್ರಚಾರಕ್ಕಾಗಿ ಭಾರತಕ್ಕೆ ಆಗಮಿಸಿರುವ ಆಸ್ಟ್ರೇಲಿಯಾದ ಕ್ರಿಕೆಟರ್ ಬ್ರೆಟ್ ಲೀ ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರನ್ನು ಈ ಕ್ಷಣದ ಶ್ರೇಷ್ಟ ಕ್ರಿಕೆಟರ್ ಎಂದು ಬಣ್ಣಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಶ್ರೇಷ್ಟ ಬ್ಯಾಟ್ಸ್‌ಮನ್ ಆಗಿದ್ದರು. ಈಗ ವಿರಾಟ್ ಕೊಹ್ಲಿ ಅವರು ತಮ್ಮ ಕಾರ್ಯನೀತಿಯಿಂದ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರ ಆಕ್ರಮಣಕಾರಿ ಪ್ರವೃತ್ತಿ ಅಚ್ಚರಿ ಹುಟ್ಟಿಸುತ್ತದೆ ಎಂದು ಲೀ ವರದಿಗಾರರಿಗೆ ತಿಳಿಸಿದರು.
ತಾವು ಕ್ರಿಕೆಟನ್ನು ಇನ್ನೂ ಪ್ರೀತಿಸುವುದಾಗಿ ತಿಳಿಸಿದ ವೇಗಿ, ನಟನೆ ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಎಂದು ಬಣ್ಣಿಸಿದರು.
ತಮ್ಮ ಚಿತ್ರ ಅನ್ ಇಂಡಿಯನ್ ಕುರಿತು ಮಾತನಾಡುತ್ತಾ, ನಾನು ಜನರು ಚಿತ್ರವನ್ನು ನೋಡಿ ಆನಂದಿಸಲು ಬಯಸುತ್ತೇನೆ. ಇದೊಂದು ರೊಮಾಂಟಿಕ್ ಹಾಸ್ಯ ಕಥೆಯಾಗಿದೆ ಎಂದು ಹೇಳಿದರು.
ಈ ಚಿತ್ರ ಮಿಶ್ರಸಂಸ್ಕೃತಿಯ ಸಂಬಂಧದಿಂದ ಕೂಡಿದೆ. ಇದನ್ನು ವೀಕ್ಷಿಸಿದ ಬಳಿಕ ಅನೇಕ ಜನರು ಬಂದು ನಾವು ಕೂಡ ಇಂತಹದ್ದೇ ಅನುಭವಿಸಿದ್ದೇವೆ ಎಂದು ಹೇಳಿದರು.
ವಿರಾಟ್ ಕೊಹ್ಲಿ ಈ ಕ್ಷಣದ ಶ್ರೇಷ್ಟ ಕ್ರಿಕೆಟರ್: ಬ್ರೆಟ್ ಲೀ