Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ 400 ಪ್ಲಸ್ ಸ್ಕೋರ್ ಮಾಡುವುದು ಅಸಾಧ್ಯವಲ್ಲ: ಕಪಿಲ್ ದೇವ್

ವಿರಾಟ್ ಕೊಹ್ಲಿ 400 ಪ್ಲಸ್ ಸ್ಕೋರ್ ಮಾಡುವುದು ಅಸಾಧ್ಯವಲ್ಲ:  ಕಪಿಲ್ ದೇವ್
ಕಿಂಗ್‌ಸ್ಟನ್ , ಸೋಮವಾರ, 1 ಆಗಸ್ಟ್ 2016 (11:29 IST)
ಪ್ರತಿಭಾಶಾಲಿ ವಿರಾಟ್ ಕೊಹ್ಲಿ ಟೆಸ್ಟ್ ಪಂದ್ಯದಲ್ಲಿ 400 ಪ್ಲಸ್ ಗಳಿಸಿ ಬ್ರಿಯಾನ್ ಲಾರಾ ದಾಖಲೆಯನ್ನು ಮುರಿಯುತ್ತಾರೆಂದು ಭಾರತದ ಮಾಜಿ ನಾಯಕ ಕಪಿಲ್ ದೇವ್ ಭವಿಷ್ಯ ನುಡಿದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಕೊಹ್ಲಿ ಮೊದಲ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದರು. 

ಕೇವಲ 27 ವರ್ಷ ವಯಸ್ಸಿನಲ್ಲೇ ಕ್ರಿಕೆಟ್‌ನ ಶ್ರೇಷ್ಟರಲ್ಲಿ ಒಬ್ಬರು ಎಂದು ಈಗಾಗಲೇ  ಕೊಹ್ಲಿಯನ್ನು ಶ್ಲಾಘಿಸಲಾಗಿದೆ. ಕೊಹ್ಲಿ ವಿಪುಲ ಸುಧಾರಣೆಯಾಗಿದ್ದಾರೆ. ಈಗಲೂ ನಾನು ಸಚಿನ್ ಹೆಚ್ಚು ಪ್ರತಿಭಾಶಾಲಿ ಎಂದೇ ಹೇಳುತ್ತೇನೆ. ಆದರೆ ಕೊಹ್ಲಿ ಬೌಲಿಂಗ್ ದಾಳಿಯನ್ನು ಛಿದ್ರ ಮಾಡುವ ರೀತಿ ಆಡುತ್ತಾರೆ ಎಂದು ಕಪಿಲ್ ಹೇಳಿದರು.
 
ಈ ಸೀಸನ್‌ನಲ್ಲಿ ಅನೇಕ ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಕೊಹ್ಲಿ ವಿಶ್ವದಾಖಲೆ 401 ರನ್ ಮುರಿಯಲು ತಮಗೆ ಇಷ್ಟವಾದ ಪರಿಪೂರ್ಣ ಪಿಚ್ ಹುಡುಕುವುದು ಖಚಿತ. ಸ್ವದೇಶಿ ಸೀಸನ್‌ನಲ್ಲಿ ಅನೇಕ ಪಿಚ್‌ಗಳು ಟರ್ನ್ ಆಗುತ್ತವೆ. ಆದರೆ ಕೊಹ್ಲಿ ಒಂದೆರಡು ಪರಿಪೂರ್ಣ ಪಿಚ್‌ಗಳನ್ನು ಖಂಡಿತವಾಗಿ ಹುಡುಕುತ್ತಾರೆ ಮತ್ತು ಲಾರಾ ಅವರ 401 ರನ್ ದಾಖಲೆ ಅಪಾಯದಲ್ಲಿದೆ ಎಂದು ಕಪಿಲ್ ಭವಿಷ್ಯ ನುಡಿದರು.
 
ಟೆಸ್ಟ್ ಕ್ರಿಕೆಟ್‌ನಲ್ಲಿ 400 ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ವೆಸ್ಟ್ ಇಂಡಿಯನ್ ಗ್ರೇಟ್ ಲಾರಾ. ಕೊಹ್ಲಿ 42 ಟೆಸ್ಟ್‌ಗಳನ್ನು ಮತ್ತು 73 ಇನ್ನಿಂಗ್ಸ್ ಆಡಿದ್ದಾರೆ. ಅವರು ಒಟ್ಟು 3194 ರನ್ ಸ್ಕೋರ್ ಮಾಡಿದ್ದು ಅದರಲ್ಲಿ 12 ಶತಕಗಳು ಮತ್ತು ಒಂದು ದ್ವಿಶತಕ ಹೊಂದಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಮನೋಜ್ಞ ಶತಕ: ಭಾರತಕ್ಕೆ 162 ರನ್ ಲೀಡ್