Select Your Language

Notifications

webdunia
webdunia
webdunia
webdunia

ಬ್ಯಾಟಿಂಗ್‌ ವೈಫಲ್ಯಕ್ಕೆ ಬೆಲೆತೆತ್ತ ಟೀಂ ಇಂಡಿಯಾ: ದಶಕದ ಬಳಿಕ ಕೈತಪ್ಪಿದ ಬಾರ್ಡರ್- ಗವಾಸ್ಕರ್ ಟ್ರೋಫಿ

ಬ್ಯಾಟಿಂಗ್‌ ವೈಫಲ್ಯಕ್ಕೆ ಬೆಲೆತೆತ್ತ ಟೀಂ ಇಂಡಿಯಾ: ದಶಕದ ಬಳಿಕ ಕೈತಪ್ಪಿದ ಬಾರ್ಡರ್- ಗವಾಸ್ಕರ್ ಟ್ರೋಫಿ

Sampriya

ಸಿಡ್ನಿ , ಭಾನುವಾರ, 5 ಜನವರಿ 2025 (10:02 IST)
Photo Courtesy X
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಸೋಲುವ ಮೂಲಕ 10 ವರ್ಷಗಳ ಬಳಿಕ ಭಾರತ ತಂಡವು ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಕಳೆದುಕೊಂಡಿದೆ.

ಕೊನೆಯ ಪಂದ್ಯದಲ್ಲಿ ಭಾರತ ನೀಡಿದ 162 ರನ್‌ಗಳ ಗುರಿಯನ್ನು ಕೇವಲ 27 ಓವರ್‌ಗಳಲ್ಲೇ ಆಸ್ಟ್ರೇಲಿಯಾ ಗುರಿ ಮುಟ್ಟಿತು. ಟ್ರಾವಿಸ್‌ ಹೆಡ್‌ (34) ಹಾಗೂ ಬ್ಯೂ ವೆಬ್‌ಸ್ಟರ್‌ (39) ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸರಣಿಯನ್ನು ಭಾರತ 1-3 ಅಂತರದಿಂದ ಸೋತಿದ್ದು, ಜೊತೆಗೆ ಜೂನ್‌ನಲ್ಲಿ ಲಾರ್ಡ್ಸ್‌ನಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ರೇಸ್‌ನಿಂದಲೂ ಹೊರಬಿದ್ದಿದೆ.

ಆಸ್ಟ್ರೇಲಿಯಾ ವಿರುದ್ಧದ ಈ ಹಿಂದಿನ ನಾಲ್ಕು ಸರಣಿಗಳಲ್ಲಿ ಭಾರತ ಗೆಲುವು ಸಾಧಿಸಿತ್ತು. ತವರಿನಲ್ಲಿ ಹಾಗೂ ಆಸ್ಟ್ರೇಲಿಯಾದಲ್ಲಿ ತಲಾ ಎರಡು ಸರಣಿಗಳನ್ನು ಭಾರತ ಗೆದ್ದಿತ್ತು. ಪರ್ತ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಷ್ಟೇ ಭಾರತ ಗೆಲುವು ಸಾಧಿಸಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಯುಜ್ವೇಂದ್ರ ಚಹಲ್, ಧನಶ್ರೀ ವರ್ಮ ವಿಚ್ಛೇದನತ್ತ: ಅನುಮಾನಗಳು ನಿಜವಾಯ್ತಾ