ಮುಂಬೈ: ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಅಲ್ಲ ಈ ಖ್ಯಾತ ಕ್ರಿಕೆಟಿಗ ನಾಯಕರಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಕಳಪೆ ಫಾರ್ಮ್ ಕಾರಣಕ್ಕೆ ಸಿಡ್ನಿ ಟೆಸ್ಟ್ ನಿಂದ ರೋಹಿತ್ ಶರ್ಮಾರನ್ನೇ ಹೊರಗಿಡಲಾಗಿದೆ. ಟೀಂ ಇಂಡಿಯಾದ ನಾಯಕನೇ ಡ್ರಾಪ್ ಆಗಿರುವುದು ಇದೇ ಮೊದಲು. ಇಂತಹದ್ದೊಂದು ಕುಖ್ಯಾತಿಗೊಳಗಾಗಿರುವ ರೋಹಿತ್ ಶರ್ಮಾಗೆ ಏಕದಿನ ನಾಯಕತ್ವಕ್ಕೂ ಕೊಕ್ ನೀಡಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ.
ಭಾರತ ಇನ್ನೇನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾಗಿಯಾಗಬೇಕಿದೆ. ಈಗ ಕೇಳಿಬರುತ್ತಿರುವ ವರದಿ ಪ್ರಕಾರ ಚಾಂಪಿಯನ್ಸ್ ಟ್ರೋಫಿ ನಾಯಕತ್ವದಿಂದಲೂ ರೋಹಿತ್ ಗೆ ಕೊಕ್ ಕೊಟ್ಟರೆ ಹಾರ್ದಿಕ್ ಪಾಂಡ್ಯರನ್ನು ನಾಯಕನಾಗಿ ನೇಮಕ ಮಾಡಬಹುದು ಎಂಬ ಮಾತು ಕೇಳಿಬರುತ್ತಿದೆ.
ಈ ಹಿಂದೆ ಟಿ20 ನಾಯಕತ್ವ ಫಿಟ್ನೆಸ್ ಕಾರಣ ನೀಡಿ ಹಾರ್ದಿಕ್ ಗ ಕೊಟ್ಟಿರಲಿಲ್ಲ. ಆದರೆ ಈಗ ಭಾರತಕ್ಕೆ ರೋಹಿತ್ ಸ್ಥಾನಕ್ಕೆ ಮತ್ತೊಬ್ಬ ನಾಯಕನ ಅಗತ್ಯವಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಹೆಸರು ಕೇಳಿಬರುತ್ತಿದೆ. ಒಂದು ವೇಳೆ ಹಾರ್ದಿಕ್ ಇಲ್ಲದೇ ಹೋದರೆ ಸೂರ್ಯಕುಮಾರ್ ಯಾದವ್ ಗೇ ನಾಯಕತ್ವ ಸಿಗುವ ಸಾಧ್ಯತೆಯಿದೆ. ಈ ಟೆಸ್ಟ್ ಬಳಿಕ ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಒಂದು ಚಿತ್ರಣ ಸಿಗುವ ಸಾಧ್ಯತೆಯಿದೆ.