Select Your Language

Notifications

webdunia
webdunia
webdunia
webdunia

ಸಿಡ್ನಿ ಟೆಸ್ಟ್ ಗೆ ನಾಯಕ ರೋಹಿತ್ ಶರ್ಮಾಗೇ ಕೊಕ್: ಕೋಚ್ ಗಂಭೀರ್ ಬ್ರಹ್ಮಾಸ್ತ್ರ

Rohit Sharma

Krishnaveni K

ಸಿಡ್ನಿ , ಗುರುವಾರ, 2 ಜನವರಿ 2025 (11:23 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಳೆಯಿಂದ ಆರಂಭವಾಗಲಿರುವ ಅಂತಿಮ ಟೆಸ್ಟ್ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾಗೇ ಕೊಕ್ ನೀಡಲಾಗುತ್ತದೆಯೇ? ಕೋಚ್ ಗೌತಮ್ ಗಂಭೀರ್ ನೀಡಿರುವ ಹೇಳಿಕೆಯೊಂದು ಈಗ ಅನುಮಾನಕ್ಕೆ ಕಾರಣವಾಗಿದೆ.

ಈಗಾಗಲೇ ಸರಣಿಯಲ್ಲಿ ಭಾರತ 1-2 ಅಂತರದಲ್ಲಿ ಹಿನ್ನಡೆಯಲ್ಲಿದೆ. ಒಂದು ಪಂದ್ಯ ಡ್ರಾ ಆಗಿತ್ತು. ಎಲ್ಲಾ ಪಂದ್ಯಗಳಲ್ಲೂ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ವೈಫಲ್ಯ ಎದ್ದು ಕಾಣುತ್ತಿತ್ತು. ಇದರಿಂದ ಕೋಚ್ ಗಂಭಿರ್ ತೀರಾ ಸಿಟ್ಟಿಗೆದ್ದಿದ್ದಾರೆ ಎನ್ನಲಾಗಿದೆ. ಕಳೆದ ಟೆಸ್ಟ್ ಸೋಲಿನ ಬಳಿಕ ಗಂಭೀರ್ ಬ್ಯಾಟಿಗರ ಮೇಲೆ ಪೆವಿಲಿಯನ್ ನಲ್ಲಿ ಹರಿಹಾಯ್ದಿದ್ದಾರೆ ಎಂಬ ಸುದ್ದಿಗಳಿತ್ತು.

ಇದರ ಬೆನ್ನಲ್ಲೇ ಇಂದು ಪತ್ರಿಕಾಗೋಷ್ಠಿಯಲ್ಲಿ ನಾಳೆಯ ಆಡುವ ಬಳಗದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಗಂಭೀರ್, ಪಿಚ್ ನೋಡಿಕೊಂಡು ಆಡುವ ಬಳಗವನ್ನು ನಿರ್ಧರಿಸುತ್ತೇವೆ ಎಂದಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ. ಜೊತೆಗೆ ಅಭ್ಯಾಸದ ವೇಳೆ ಕೊಹ್ಲಿ, ಕೆಎಲ್ ರಾಹುಲ್, ಶುಬ್ಮನ್ ಗಿಲ್ ಮಾತ್ರ ಸ್ಲಿಪ್ ನಲ್ಲಿ ಕ್ಯಾಚಿಂಗ್ ಅಭ್ಯಾಸ ನಡೆಸುತ್ತಿದ್ದುದು ಗಮನಕ್ಕೆ ಬಂದಿದೆ.

ಹೀಗಾಗಿ ಕಳಪೆ ಫಾರ್ಮ್ ನಲ್ಲಿರುವ ರೋಹಿತ್ ಗೇ ಕೊಕ್ ನೀಡಿ ಜಸ್ಪ್ರೀತ್ ಬುಮ್ರಾಗೆ ಕೊನೆಯ ಪಂದ್ಯದ ನಾಯಕತ್ವ ನೀಡುವ ಸಾಧ್ಯತೆಯಿದೆ ಎಂಬ ಸುದ್ದಿ ದಟ್ಟವಾಗಿದೆ. ಹೀಗಾದಲ್ಲಿ ಇದು ರೋಹಿತ್ ಶರ್ಮಾಗೆ ತೀರಾ ಮುಜುಗರದ ಸಂಗತಿಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ, ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ಪಿಂಕ್ ಟೆಸ್ಟ್: ಕಾರಣವೇನು