ಸಿಡ್ನಿ: ಸತತ ಸೋಲುಗಳಿಂದ ಕಂಗೆಟ್ಟಿರುವ ಟೀಂ ಇಂಡಿಯಾ ಈಗ ಒಡೆದ ಮನೆಯಂತಾಗಿದೆ ಎನ್ನಲಾಗಿದೆ. ರೋಹಿತ್ ಸ್ಥಾನದ ಮೇಲೆ ಓರ್ವ ಹಿರಿಯ ಆಟಗಾರ ಕಣ್ಣಿಟ್ಟಿದ್ದಾರೆ ಎಂದು ವರದಿಯಾಗಿದೆ.
ನ್ಯೂಜಿಲೆಂಡ್ ವಿರುದ್ಧ ಸರಣಿ ವೈಟ್ ವಾಶ್ ಅವಮಾನ, ಆಸ್ಟ್ರೇಲಿಯಾ ವಿರುದ್ಧ ಸತತ ಸೋಲು, ಬ್ಯಾಟಿಂಗ್ ವೈಫಲ್ಯ, ಡಬ್ಲ್ಯುಟಿಸಿ ಫೈನಲ್ ಅವಕಾಶ ಮಿಸ್ ಆಗಿರುವುದು ಟೀಂ ಇಂಡಿಯಾದಲ್ಲಿ ಒಡಕು ಮೂಡಿಸಿದೆ ಎನ್ನಲಾಗಿದೆ. ಜೊತೆಗೆ ತಂಡದ ಆಟಗಾರರ ಮೇಲೆ ಸ್ವತಃ ಕೋಚ್ ಗೌತಮ್ ಗಂಭೀರ್ ಆಕ್ರೋಶಗೊಂಡಿದ್ದಾರಂತೆ.
ರೋಹಿತ್ ಶರ್ಮಾ ನಾಯಕತ್ವಕ್ಕೆ ರಾಜೀನಾಮೆ ಕೊಡಲು ತಂಡದೊಳಗೇ ಒತ್ತಾಯವಿದೆ. ಇದೇ ಆಸ್ಟ್ರೇಲಿಯಾ ಸರಣಿಯ ನಡುವೆಯೇ ರೋಹಿತ್ ನಾಯಕತ್ವ ತ್ಯಜಿಸಿದರೂ ಅವರ ಸ್ಥಾನ ತುಂಬಲು ರೆಡಿ ಎಂದು ಓರ್ವ ಹಿರಿಯ ಆಟಗಾರನೇ ಹೇಳಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಆಟಗಾರ ಯಾರು ಎಂದು ಬಹಿರಂಗವಾಗಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಕೋಚ್ ಗೌತಮ್ ಗಂಭೀರ್ ಚೇತೇಶ್ವರ ಪೂಜಾರರನ್ನು ಆಸೀಸ್ ಸರಣಿಗೆ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಬಿಸಿಸಿಐ ಮುಂದೆ ಬೇಡಿಕೆಯಿಟ್ಟಿದ್ದರಂತೆ. ಪೂಜಾರ ಟೆಸ್ಟ್ ಕ್ರಿಕೆಟ್ ನ ಸ್ಪೆಷಲಿಸ್ಟ್ ಆಟಗಾರ. ಹಿರಿಯ ಆಟಗಾರನಿಗೆ ಆಸೀಸ್ ವಿರುದ್ಧ ಉತ್ತಮ ದಾಖಲೆಯಿದೆ. ಹೀಗಾಗಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕೆಂದು ಗಂಭೀರ್ ತುಂಬಾ ಒತ್ತಾಯಿಸಿದ್ದರಂತೆ. ಆದರೆ ಬಿಸಿಸಿಐ ಇದಕ್ಕೆ ಒಪ್ಪಿಲ್ಲ ಎನ್ನಲಾಗುತ್ತಿದೆ.