ಮುಂಬೈ: 2025 ರ ಹೊಸ ವರ್ಷ ಆರಂಭವಾಗಿದ್ದು, ಈ ವರ್ಷ ಟೀಂ ಇಂಡಿಯಾ ಕ್ರಿಕೆಟ್ ನ ಕೆಲವು ಹಿರಿಯ ಕ್ರಿಕೆಟಿಗರು ನಿವೃತ್ತಿಯಾಗುವುದು ಖಚಿತವಾಗಿದೆ. ಈ ವರ್ಷ ನಿವೃತ್ತಿ ಘೋಷಿಸಬಹುದಾದ ಕ್ರಿಕೆಟಿಗರು ಯಾರು ನೋಡೋಣ.
ರೋಹಿತ್-ಕೊಹ್ಲಿ ಯುಗಾಂತ್ಯ
ಈ ವರ್ಷ ಮಾರ್ಚ್ ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಟೀಂ ಇಂಡಿಯಾ ಕಂಡ ಶ್ರೇಷ್ಠ ಆಟಗಾರರಾದ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ವಿದಾಯ ಖಚಿತ ಎನ್ನಲಾಗುತ್ತಿದೆ. ಅದರಲ್ಲೂ ರೋಹಿತ್ ಟೆಸ್ಟ್ ಕ್ರಿಕೆಟ್ ಗೆ ಇದೇ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಬಳಿಕ ನಿವೃತ್ತಿ ಘೋಷಿಸಬಹುದು ಎನ್ನಲಾಗುತ್ತಿದೆ. ಅದಾದ ಬಳಿಕ ಚಾಂಪಿಯನ್ಸ್ ಟ್ರೋಫಿಯೊಂದಿಗೆ ಎಲ್ಲಾ ಮಾದರಿಗೆ ನಿವೃತ್ತಿ ಘೋಷಿಸಬಹುದು ಎನ್ನಲಾಗುತ್ತಿದೆ. ವಿರಾಟ್ ಕೊಹ್ಲಿ ಕತೆಯೂ ಇದೇ ಆಗಿದೆ. ಇದರೊಂದಿಗೆ ಟೀಂ ಇಂಡಿಯಾದಲ್ಲಿ ಹೊಸಬರ ಶಕೆ ಆರಂಭವಾಗಲಿದೆ. ರವೀಂದ್ರ ಜಡೇಜಾ ವೃತ್ತಿ ಜೀವನದ ಅಂತಿಮ ಘಟ್ಟದಲ್ಲಿದ್ದು, ಇನ್ನೆರಡು ಸರಣಿಗಳಲ್ಲಿ ಅವರ ಪ್ರದರ್ಶನ ನೋಡಿಕೊಂಡು ನಿವೃತ್ತಿ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಆಡುವ ಅವಕಾಶ ಸಿಗದ ಕ್ರಿಕೆಟಿಗರ ದಂಡು
ಇನ್ನೂ ನಿವೃತ್ತಿ ಘೋಷಿಸದ ಅನೇಕ ಹಿರಿಯ ಕ್ರಿಕೆಟಿಗರ ದಂಡು ಟೀಂ ಇಂಡಿಯಾದಲ್ಲಿದೆ. ಆ ಪೈಕಿ ಚೇತೇಶ್ವರ ಪೂಜಾರ, ಅಜಿಂಕ್ಯಾ ರೆಹಾನೆ ಪ್ರಮುಖರು. ಇವರಿಬ್ಬರೂ ಈ ವರ್ಷವೇ ವಿದಾಯ ಘೋಷಿಸುವ ಸಾಧ್ಯತೆಯಿದೆ.
ಇದಲ್ಲದೆ ಐಪಿಎಲ್ ನಲ್ಲಿ ಆಡುತ್ತಿರುವ ಹಿರಿಯ ಕ್ರಿಕೆಟಿಗ ಎಂಎಸ್ ಧೋನಿ ಕೂಡಾ ಇದೇ ಆವೃತ್ತಿ ಕೊನೆಯ ತಮ್ಮ ಪಾಲಿಗೆ ಆಟಗಾರನಾಗಿ ಕೊನೆಯ ಐಪಿಎಲ್ ಎಂದು ಘೋಷಿಸುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಟೀಂ ಇಂಡಿಯಾ ಪಾಲಿಗೆ ಈ ವರ್ಷ ಪರಿವರ್ತನೆಯ ಕಾಲವಾಗಲಿದೆ.