Select Your Language

Notifications

webdunia
webdunia
webdunia
webdunia

IND vs AUS: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲು, ಇಂದೇ ಬರುತ್ತಾ ರೋಹಿತ್ ಶರ್ಮಾ ಬಿಗ್ ಅನೌನ್ಸ್ ಮೆಂಟ್

Australia team

Krishnaveni K

ಮೆಲ್ಬೊರ್ನ್ , ಸೋಮವಾರ, 30 ಡಿಸೆಂಬರ್ 2024 (12:03 IST)
Photo Credit: X
ಮೆಲ್ಬೊರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯವನ್ನು 184 ರನ್ ಗಳಿಂದ ಸೋತ ಟೀಂ ಇಂಡಿಯಾ ಡಬ್ಲ್ಯುಟಿಸಿ ಫೈನಲ್ ಗೇರುವ ಅವಕಾಶವನ್ನೂ ಕೈ ಚೆಲ್ಲಿದೆ. ನಾಯಕ ರೋಹಿತ್ ಶರ್ಮಾ ಈ ಸೋಲಿನ ಬಳಿಕ ಏನು ಮಾತನಾಡಲಿದ್ದಾರೆ ಎಂಬುದು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
 

ಕಳೆದ ಎರಡೂ ಟೆಸ್ಟ್ ಸರಣಿಗಳಲ್ಲಿ ರೋಹಿತ್-ಕೊಹ್ಲಿ ಜೋಡಿ ದಯನೀಯ ವೈಫಲ್ಯ ಅನುಭವಿಸುತ್ತಿರುವುದೇ ಟೀಂ ಇಂಡಿಯಾ ಸೋಲಿಗೆ ಕಾರಣವಾಗಿದೆ. ಈ ಸರಣಿಯಲ್ಲೂ ಈ ಇಬ್ಬರೂ ಕ್ಲಿಕ್ ಆಗಿಲ್ಲ. ಹೀಗಾಗಿ ಇಬ್ಬರ ನಿವೃತ್ತಿಗೆ ಒತ್ತಾಯ ಕೇಳಿಬರುತ್ತಿದೆ. ಬಿಸಿಸಿಐ ಕೂಡಾ ಇಬ್ಬರಿಗೂ ಈ ಟೆಸ್ಟ್ ಸರಣಿಯನ್ನು ಡೆಡ್ ಲೈನ್ ಆಗಿ ನೀಡಿತ್ತು ಎನ್ನಲಾಗಿದೆ.

ಹೀಗಾಗಿ ಇಂದು ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿವೃತ್ತಿ ಬಗ್ಗೆ ಘೋಷಣೆ ಮಾಡಬಹುದೇ ಎಂಬ ಕುತೂಹಲ ಎಲ್ಲರಲ್ಲಿದೆ. ರೋಹಿತ್ ಗೆ ಸಿಡ್ನಿಯಲ್ಲಿ ನಡೆಯಲಿರುವ ಐದನೇ ಟೆಸ್ಟ್ ಪಂದ್ಯವೇ ಕೊನೆಯ ಪಂದ್ಯವಾಗಲಿದೆ ಎಂಬ ಗುಸು ಗುಸು ಕೇಳಿಬರುತ್ತಿದೆ. ಹೀಗಾಗಿ ಇಂದು ಅವರು ಇದರ ಬಗ್ಗೆ ಘೋಷಣೆ ಮಾಡಲಿದ್ದಾರಾ ಎಂಬ ಕುತೂಹಲ ಎಲ್ಲರಲ್ಲಿದೆ.

ಇಂದು ಆಸ್ಟ್ರೇಲಿಯಾ ನೀಡಿ 330 ರನ್ ಗಳ ಗುರಿ ಬೆನ್ನತ್ತುವಲ್ಲಿ ಟೀಂ ಇಂಡಿಯಾ ಟಾಪ್ ಆರ್ಡರ್ ಸಂಪೂರ್ಣ ವಿಫಲವಾಗಿತ್ತು. ರೋಹಿತ್ 9, ಕೊಹ್ಲಿ 5, ಕೆಎಲ್ ರಾಹುಲ್ 0 ಔಟಾದಾಗಲೇ ಭಾರತಕ್ಕೆ ಸೋಲಿನ ಸುಳಿವು ಸಿಕ್ಕಿತ್ತು. ಆದರೆ ಜೈಸ್ವಾಲ್ ಭರವಸೆ ಮೂಡಿಸಿದ್ದರು. ಆದರೆ ಅವರೂ ಔಟಾದಾಗ ತಂಡ ಕುಸಿತಕ್ಕೊಳಗಾಯಿತು. ಕೊನೆಗೆ ಕೇವಲ 155 ರನ್ ಗಳಿಗೆ ಆಲೌಟ್ ಆಗಿ ಮತ್ತೊಂದು ಹೀನಾಯ ಸೋಲು ಅನುಭವಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

IND vs AUS: ಆಸ್ಟ್ರೇಲಿಯಾದಿಂದ ಯಶಸ್ವಿ ಜೈಸ್ವಾಲ್ ಗೆ ಚೀಟಿಂಗ್, ಇದು ಔಟಾ ನೀವೇ ಹೇಳಿ