Select Your Language

Notifications

webdunia
webdunia
webdunia
webdunia

IND vs AUS: ಆಡುವ ಬಳಗ ಮಾತ್ರವಲ್ಲ 16 ಸದಸ್ಯರ ತಂಡದಿಂದಲೇ ರೋಹಿತ್ ಶರ್ಮಾ ಔಟ್: ದಾಖಲೆ

Rohit Sharma

Krishnaveni K

ಸಿಡ್ನಿ , ಶುಕ್ರವಾರ, 3 ಜನವರಿ 2025 (08:45 IST)
Photo Credit: X
ಸಿಡ್ನಿ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇಂದು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಆಡುವ ಬಳಗದಿಂದ ಮಾತ್ರವಲ್ಲ, 16 ಸದಸ್ಯರ ತಂಡದಿಂದಲೇ ಔಟ್ ಆಗಿ ದಾಖಲೆ ಮಾಡಿದ್ದಾರೆ.

ಇದುವರೆಗೆ ಭಾರತೀಯ ಕ್ರಿಕೆಟ್ ರಂಗದ ಇತಿಹಾಸದಲ್ಲೇ ನಾಯಕನೇ ಕಳಪೆ ಫಾರ್ಮ್ ನಿಂದ ಡ್ರಾಪ್ ಆದ ದಾಖಲೆಯೇ ಇರಲಿಲ್ಲ. ಆದರೆ ಇಂದು ರೋಹಿತ್ ಶರ್ಮಾ ಆ ಕುಖ್ಯಾತಿಗೆ ಒಳಗಾದರು. ನಿನ್ನೆಯಿಂದಲೇ ರೋಹಿತ್ ಶರ್ಮಾ ಡ್ರಾಪ್ ಆಗುವ  ಬಗ್ಗೆ ಸುದ್ದಿಗಳಿತ್ತು. ಅದು ಇಂದು ನಿಜವಾಗಿದೆ.

ರೋಹಿತ್ ಕಳೆದ ಕೆಲವು ಪಂದ್ಯಗಳಿಂದ ಏಕಂಕಿಗೇ ಔಟಾಗುತ್ತಿದ್ದಾರೆ. ಹೀಗಾಗಿ ಕೋಚ್ ಗಂಭೀರ್ ಅವರ ವಿರುದ್ಧ ಅಸಮಾಧಾನಗೊಂಡಿದ್ದರು. ಕಳೆದ ಟೆಸ್ಟ್ ಸೋಲಿನ ಬಳಿಕ ಗಂಭೀರ್ ಸಿಟ್ಟು ಹೊರಹಾಕಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ರೋಹಿತ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ.

ಅಷ್ಟೇ ಅಲ್ಲ, 16 ಸದಸ್ಯರನ್ನೊಳಗೊಂಡ ತಂಡದ ಆಟಗಾರರ ಪಟ್ಟಿಯನ್ನು ಸಂಪ್ರದಾಯದಂತೆ ಪಂದ್ಯಕ್ಕೆ ಮುನ್ನ ಬಿಡುಗಡೆ ಮಾಡಲಾಗಿದ್ದು ಇಲ್ಲೂ ರೋಹಿತ್ ಹೆಸರೇ ಇಲ್ಲ. ಇದು ರೋಹಿತ್ ಗೆ ಒಂದು ರೀತಿಯ ಅವಮಾನಕಾರೀ ವಿಚಾರವಾಗಿದೆ. ಸದ್ಯದ ಬೆಳವಣಿಗೆ ನೋಡಿದರೆ ಸಿಡ್ನಿ ಟೆಸ್ಟ್ ಮಾತ್ರವಲ್ಲ, ಟೆಸ್ಟ್ ತಂಡದಿಂದಲೇ ರೋಹಿತ್ ಶಾಶ್ವತವಾಗಿ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿದೆ. ರೋಹಿತ್ ರನ್ನು ಈ ರೀತಿ ನಡೆಸಿಕೊಂಡಿರುವುದಕ್ಕೆ ಕೋಚ್ ಗಂಭೀರ್ ಮೇಲೆ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮನು ಭಾಕರ್, ಗುಕೇಶ್ ಗೆ ಖೇಲ್ ರತ್ನ: ಕೊನೆಗೂ ಅರ್ಹರಿಗೇ ಸಿಕ್ತು ಪ್ರಶಸ್ತಿ