ನವದೆಹಲಿ: ಒಲಿಂಪಿಕ್ಸ್ ನಲ್ಲಿ ಎರಡು ಪದಕ ಗೆದ್ದು ಹೆಮ್ಮೆ ತಂದ ಮನು ಭಾಕರ್ ಮತ್ತು ಕಿರಿಯ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್ ಆದ ಗುಕೇಶ್ ಖೇಲ್ ರತ್ನ ಪ್ರಶಸ್ತಿ ಲಭಿಸಿದೆ. ಈ ಮೂಲಕ ಅರ್ಹರಿಗೇ ಪ್ರಶಸ್ತಿ ಸಿಕ್ಕಿದಂತಾಗಿದೆ.
ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನಾಮಿನೇಷನ್ ಪಟ್ಟಿಯಲ್ಲಿ ಮನು ಭಾಕರ್ ಇಲ್ಲ ಎನ್ನುವುದು ವಿವಾದವಾಗಿತ್ತು. ಸ್ವತಃ ಮನು ತಂದೆಯೇ ಈ ಬಗ್ಗೆ ಬೇಸರ ಹೊರಹಾಕಿದ್ದರು. ಪ್ರಶಸ್ತಿಗಾಗಿ ಭಿಕ್ಷೆ ಬೇಡಬೇಕಾ ಎಂದಿದ್ದರು. ವಿವಾದದ ಬಳಿಕ ಕೊನೆಯ ಕ್ಷಣದಲ್ಲಿ ಸ್ವತಃ ಕ್ರೀಡಾ ಸಚಿವರೇ ಮಧ್ಯಪ್ರವೇಶಿಸಿ ಮನು ಭಾಕರ್ ಹೆಸರು ಸೇರ್ಪಡೆಗೆ ಸೂಚನೆ ನೀಡಿದ್ದರು.
ಕೊನೆಗೂ ಈಗ ರಾಷ್ಟ್ರೀಯ ಕ್ರೀಡಾ ಪುರಸ್ಕಾರ ಪ್ರಶಸ್ತಿ ವಿಜೇತರ ಲಿಸ್ಟ್ ಪ್ರಕಟವಾಗಿದೆ. ಮನು ಭಾಕರ್ ಮತ್ತು ಗುಕೇಶ್, ಹಾಕಿ ನಾಯಕ ಹರ್ಮನ್ ಪ್ರೀತ್ ಸಿಂಗ್, ಪ್ಯಾರಾ ಅಥ್ಲೆಟ್ ಪ್ರವೀಣ್ ಕುಮಾರ್ ಗೆ ಖೇಲ್ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಜನವರಿ 17 ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುತ್ತದೆ.
ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರಲ್ಲಿ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್, ಪ್ಯಾರಾ ಅಥ್ಲೆಟ್ ಪ್ರವೀಣ್ ಕುಮಾರ್ ಕೂಡಾ ಇದ್ದರು. ಅಂತಿಮ ಪಟ್ಟಿಯಲ್ಲಿ ಗುಕೇಶ್, ಮನು ಭಾಕರ್ ಹೆಸರು ಸೇರ್ಪಡೆಯಾಗಿತ್ತು