ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್ ಮುಂದುವರಿದಿದೆ. ಹೀಗಾಗಿ ಆಕ್ರೋಶಗೊಂಡ ಫ್ಯಾನ್ಸ್ ರೋಹಿತ್ ಅಲ್ಲ ಮೊದಲು ಗಂಭೀರ್ ಕೋಚ್ ಹುದ್ದೆಯಿಂದ ಹೋಗಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಗೌತಮ್ ಗಂಭೀರ್ ಕೋಚ್ ಆದಾಗನಿಂದ ಟೀಂ ಇಂಡಿಯಾದ ಬ್ಯಾಟಿಂಗ್ ತಳಮಟ್ಟ ತಲುಪಿದೆ. ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಸ್ವತಃ ನಾಯಕ ರೋಹಿತ್ ಶರ್ಮಾರನ್ನೇ ಆಡುವ ಬಳಗದಿಂದ ಹೊರಗಿಟ್ಟಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ನಡುವೆ ಕೊಹ್ಲಿಸೇರಿದಂತೆ ತಂಡದ ಟಾಪ್ ಆರ್ಡರ್ ಬ್ಯಾಟಿಗರೆಲ್ಲಾ ಜುಜುಬಿ ಮೊತ್ತಕ್ಕೆ ಔಟಾಗಿದ್ದಾರೆ.
ಈ ನಡುವೆ ನೆಟ್ಟಿಗರು ಗೌತಮ್ ಗಂಭೀರ್ ಮೇಲೆ ಇನ್ನಿಲ್ಲದಂತೆ ಆಕ್ರೋಶ ಹೊರಹಾಕುತ್ತಾರೆ. ಕೊಹ್ಲಿ ಕೂಡಾ ಕಳೆದ ಕೆಲವು ತಿಂಗಳುಳಗಳಿನಿಂದ ಮೊದಲಿನ ಫಾರ್ಮ್ ನಲ್ಲಿಲ್ಲ. ಹಾಗಿದ್ದರೂ ಅವರಿಗೆ ಅವಕಾಶ ನೀಡಲಾಗುತ್ತಿದೆ. ಆದರೆ ರೋಹಿತ್ ಕಳೆದ ಎರಡು ಸರಣಿಗಳಲ್ಲಿ ಆಡಿಲ್ಲ ಎಂದು ಅವರಿಗೆ ಈ ರೀತಿ ಅವಮಾನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಭೀರ್ ಕೋಚ್ ಆಗುವವರೆಗೂ ತಂಡ ಹೀಗಿರಲಿಲ್ಲ. ಗಂಭೀರ್ ಕೋಚ್ ಆದ ಮೇಲೆ ತಂಡದಲ್ಲಿ ಯಾವುದೂ ಸರಿಯಿಲ್ಲ. ಹೀಗಾಗಿ ತಂಡದಿಂದ ತೊಲಗಬೇಕಾಗಿರುವುದು ರೋಹಿತ್, ಕೊಹ್ಲಿ ಅಲ್ಲ. ಮೊದಲು ಕೋಚ್ ಸ್ಥಾನದಿಂದ ಗೌತಮ್ ಗಂಭೀರ್ ರನ್ನು ಹೊರಗೆ ಹಾಗಬೇಕು. ಕೇವಲ ಐಪಿಎಲ್ ಸಕ್ಸಸ್ ನೋಡಿ ಗಂಭೀರ್ ನ್ನು ಕೋಚ್ ಮಾಡಬಾರದಿತ್ತು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.