ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮ ದಾಂಪತ್ಯ ಜೀವನ ಮುರಿದುಬಿತ್ತಾ? ದಂಪತಿಯ ನಡೆ ಈಗ ಅನುಮಾನಕ್ಕೆ ಕಾರಣವಾಗಿದೆ.
ಕೊರಿಯಾಗ್ರಫರ್ ಆಗಿರುವ ಧನ ಶ್ರೀ ವರ್ಮರನ್ನು ಚಹಲ್ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇದೀಗ ನಾಲ್ಕು ವರ್ಷಗಳ ದಾಂಪತ್ಯ ಜೀವನ ಕೊನೆಗೊಳಿಸಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ.
ಈ ಸುದ್ದಿ ಸಮರ್ಥಿಸಿಕೊಳ್ಳುವಂತೆ ಈಗ ಇಬ್ಬರೂ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪರಸ್ಪರ ಅನ್ ಫಾಲೋ ಮಾಡಿಕೊಂಡಿದ್ದಾರೆ. ಅಲ್ಲದೆ, ತಮ್ಮಿಬ್ಬರ ಫೋಟೋಗಳನ್ನೂ ಡಿಲೀಟ್ ಮಾಡಿಕೊಂಡಿದ್ದಾರೆ. ಹೀಗಾಗಿ ದಂಪತಿ ನಡುವೆ ಬಿರುಕು ಮೂಡಿದೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ.
ಎರಡು ವರ್ಷ ಹಿಂದೆಯೂ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳು ಬಂದಿತ್ತು. ಚಹಲ್ ಪತ್ನಿ ಧನಶ್ರೀ ವಿಡಿಯೋ, ಡ್ಯಾನ್ಸ್ ಜೊತೆಗೆ ಬೇರೆ ಹುಡುಗರೊಂದಿಗೆ ತೀರಾ ಸಲುಗೆಯಿಂದಿರುವುದು ಚಹಲ್ ಗೆ ಇಷ್ಟವಾಗುತ್ತಿರಲಿಲ್ಲ ಎಂದೆಲ್ಲಾ ರೂಮರ್ ಗಳು ಹಬ್ಬಿದ್ದವು. ಆದರೆ ಬಳಿಕ ದಂಪತಿಯೇ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಇದೆಲ್ಲಾ ಸುಳ್ಳು ಸುದ್ದಿ ಎಂದು ವದಂತಿಗಳಿಗೆ ತೆರೆ ಎಳೆದಿದ್ದರು. ಇದೀಗ ಮತ್ತೊಮ್ಮೆ ಈ ಸುದ್ದಿ ಹಬ್ಬಿದೆ. ಈ ಬಾರಿ ಅದಕ್ಕೆ ತಕ್ಕ ಸಾಕ್ಷ್ಯಗಳೂ ಕಂಡುಬಂದಿವೆ. ಹೀಗಾಗಿ ಈಗ ಇಬ್ಬರೂ ಸ್ಪಷ್ಟನೆ ನೀಡುವವರೆಗೂ ಯಾವುದನ್ನೂ ಯಾರೂ ನಂಬುವ ಸ್ಥಿತಿಯಲ್ಲಿಲ್ಲ.