ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕತ್ವ ವಿಚಾರಕ್ಕೇ ಸುದ್ದಿಯಾಗುತ್ತಿದೆ. ಈ ಪಂದ್ಯ ಎರಡನೇ ದಿನಕ್ಕೆ ನಾಯಕ ಬದಲಾವಣೆಯಾಗಿದ್ದು ವಿರಾಟ್ ಕೊಹ್ಲಿ ನಾಯಕನಾಗಿ ಕಮ್ ಬ್ಯಾಕ್ ಮಾಡಿದ್ದಾರೆ.
ಎರಡನೇ ದಿನದಾಟದಲ್ಲಿ ನಾಯಕ ಜಸ್ಪ್ರೀತ್ ಬುಮ್ರಾ ಗಾಯಗೊಂಡಿದ್ದಾರೆ. ಮೊದಲು ಕೆಲವು ಹೊತ್ತು ಪೆವಿಲಿಯನ್ ಕೂತು ವಿಶ್ರಾಂತಿ ಪಡೆದಿದ್ದ ಬುಮ್ರಾ ಬಳಿಕ ಒಂದು ಓವರ್ ಬೌಲಿಂಗ್ ಮಾಡಲು ಬಂದಿದ್ದರು. ಆದರೆ ಮತ್ತೆ ಅವರು ನೋವು ಅನುಭವಿಸುತ್ತಿದ್ದರಿಂದ ಮೈದಾನದಲ್ಲಿದ್ದ ವಿರಾಟ್ ಕೊಹ್ಲಿ ಬಳಿಕ ಮಾತುಕತೆ ನಡೆಸಿ ಹೊರ ನಡೆದರು.
ಬುಮ್ರಾರನ್ನು ಸಹಾಯಕ ಸಿಬ್ಬಂದಿ ಕಾರಿನಲ್ಲಿ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸ್ಕ್ಯಾನಿಂಗ್ ಮಾಡಿಸಲು ಕರೆದುಕೊಂಡು ಹೋಗಲಾಗಿದೆ. ಇದೀಗ ಅವರ ಗಾಯದ ತೀವ್ರತೆ ಎಷ್ಟಿದೆ ಎನ್ನುವುದು ತಿಳಿದುಬಂದಿಲ್ಲ.
ಬುಮ್ರಾ ಮೈದಾನದಿಂದ ಹೊರನಡೆದ ಬಳಿಕ ಕೊಹ್ಲಿ ನಾಯಕನ ಜವಾಬ್ಧಾರಿ ನಿಭಾಯಿಸುತ್ತಿದ್ದಾರೆ. ಬಹಳ ದಿನಗಳ ನಂತರ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿ ಕಮ್ ಬ್ಯಾಕ್ ಮಾಡಿರುವುದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಅಷ್ಟೇ ಅಲ್ಲ, ಅವರ ನಾಯಕತ್ವದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿದೆ. ಬುಮ್ರಾ ಇಲ್ಲದೆಯೂ ತಂಡ ಆಸ್ಟ್ರೇಲಿಯಾವನ್ನು 181 ರನ್ ಗಳಿಗೆ ಆಲೌಟ್ ಆಗಿದೆ. ಭಾರತ ಮೊದಲ ಇನಿಂಗ್ಸ್ ನಲ್ಲಿ 185 ರನ್ ಗಳಿಸಿತ್ತು. ಇದರೊಂದಿಗೆ ಆಸೀಸ್ 4 ರನ್ ಗಳ ಹಿನ್ನಡೆ ಅನುಭವಿಸಿದೆ.