Select Your Language

Notifications

webdunia
webdunia
webdunia
webdunia

IND vs AUS: ಓಯ್ ಕಾನ್ ಸ್ಟಾಸ್ ಬಾಲ್ ಕಾಣಿಸ್ತಿಲ್ವಾ: ಹಿಂದಿಯಲ್ಲೇ ಎದುರಾಳಿ ಕೆಣಕಿದ ಯಶಸ್ವಿ ಜೈಸ್ವಾಲ್ ವಿಡಿಯೋ

Jaiswal

Krishnaveni K

ಸಿಡ್ನಿ , ಶನಿವಾರ, 4 ಜನವರಿ 2025 (10:32 IST)
Photo Credit: X
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಎರಡನೇ ದಿನದಾಟದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಎದುರಾಳಿ ಕಾನ್ ಸ್ಟಾನ್ ರನ್ನು ಯಶಸ್ವಿ ಜೈಸ್ವಾಲ್ ಹಿಂದಿಯಲ್ಲೇ ಓಯ್ ಕಾನ್ ಸ್ಟಾಸ್ ಎಂದು ಮಾತನಾಡಿಸಿದ ಫನ್ನಿ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮೊದಲ ಇನಿಂಗ್ಸ್ ನಲ್ಲಿ ಭಾರತ 185 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಆಸೀಸ್ ಕೇವಲ 181 ರನ್ ಗಳಿಗೆ ಆಲೌಟ್ ಆಗಿ 4 ರನ್ ಗಳ ಹಿನ್ನಡೆ ಅನುಭವಿಸಿತು. ಈ ಕ್ರೆಡಿಟ್ ಟೀಂ ಇಂಡಿಯಾ ಬೌಲರ್ ಗಳಿಗೆ ಸಲ್ಲಬೇಕು.

ನಾಯಕ ಜಸ್ಪ್ರೀತ್ ಬುಮ್ರಾ ಗಾಯಗೊಂಡು ಮೈದಾನದಿಂದ ಹೊರನಡೆದ ಬಳಿಕ ಕೊಹ್ಲಿ ಕ್ಯಾಪ್ಟನ್ ಜವಾಬ್ಧಾರಿ ನಿಭಾಯಿಸಿದ್ದು ಗಮನಾರ್ಹವಾಗಿತ್ತು. ಭಾರತ ಮೈದಾನದಲ್ಲಿ ಆಕ್ರಮಣಕಾರಿಯಾಗಿ ಆಡುತ್ತಿದೆ. ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ಅದ್ಭುತವಾಗಿ ಬೌಲಿಂಗ್ ನಡೆಸಿದರು. ಬುಮ್ರಾ 2 ವಿಕೆಟ್ ಕಬಳಿಸಿದ್ದರೆ ಪ್ರಸಿದ್ಧ ಕೃಷ್ಣ ಮತ್ತು ಸಿರಾಜ್ ತಲಾ 3 ವಿಕೆಟ್ ಹಾಗೂ  ನಿತೀಶ್ ರೆಡ್ಡಿ 2 ವಿಕೆಟ್ ಕಬಳಿಸಿ ಗಮನ ಸೆಳೆದರು.

ಆಸೀಸ್ ಬ್ಯಾಟಿಂಗ್ ವೇಳೆ ಸಾಮ್ಕಾನ್ ಸ್ಟಾಸ್ ರನ್ನು ಯಶಸ್ವಿ ಜೈಸ್ವಾಲ್ ಬೇಕೆಂದೇ ಕೆಣಕಿದರು. ಸಿರಾಜ್ ಬೌಲಿಂಗ್ ಎದುರಿಸಿದ ಕಾನ್ ಸ್ಟಾಸ್ ಒಂದು ಹಂತದಲ್ಲಿ ಸರಿಯಾಗಿ ನಿಭಾಯಿಸಲಾಗದೇ ಎಡವಿದರು. ಆಗ ಪಕ್ಕದಲ್ಲೇ ನಿಂತು ಫೀಲ್ಡಿಂಗ್ ಮಾಡುತ್ತಿದ್ದ ಜೈಸ್ವಾಲ್ ತಮ್ಮ ಪಕ್ಕದ ಮನೆಯವರನ್ನು ಕರೆಯುವಂತೆ ಓಯ್ ಕಾನ್ ಸ್ಟಾಸ್ ಏನು ಬಾಲ್ ಕಾಣಿಸ್ತಿಲ್ವಾ? ಶಾಟ್ ಬರ್ತಾ ಇಲ್ಲ ಎಂದು ಹಿಂದಿಯಲ್ಲೇ ಮಾತನಾಡಿಸಿ ಕೆಣಕಿದ್ದಾರೆ. ಹಿಂದಿ ಅರಿಯದ ಕಾನ್ ಸ್ಟಾಸ್ ಬೆಪ್ಪಾಗಿ ನೋಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ  ವೈರಲ್ ಆಗಿದ್ದು ಎಲ್ಲರೂ ನಕ್ಕುಬಿಡುವಂತೆ ಮಾಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

IND vs AUS: ಟೀಂ ಇಂಡಿಯಾಗೆ ಮತ್ತೊಂದು ಶಾಕ್, ಪಂದ್ಯದ ಮಧ್ಯದಲ್ಲೇ ವಿರಾಟ್ ಕೊಹ್ಲಿ ಕ್ಯಾಪ್ಟನ್