ಲಕ್ನೋ: ಐಪಿಎಲ್ 2025 ರಲ್ಲಿ ನಿನ್ನೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ಗಳಿಸಿದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಕೆಎಲ್ ರಾಹುಲ್ ಅಂದು ಮೈದಾನದಲ್ಲಿ ಬೈದು ಅವಮಾನ ಮಾಡಿದ್ದ ಲಕ್ನೋ ಮಾಲಿಕ ಸಂಜೀವ್ ಗೊಯೆಂಕಾಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೆಎಲ್ ರಾಹುಲ್ ಕಳೆದ ಆವೃತ್ತಿಯಲ್ಲಿ ಲಕ್ನೋ ತಂಡದ ನಾಯಕರಾಗಿದ್ದರು. ತಂಡದ ಸೋಲಿಗೆ ರಾಹುಲ್ ರನ್ನೇ ಹೊಣೆ ಮಾಡಿದ್ದ ಸಂಜೀವ್ ಗೊಯೆಂಕಾ ಮೈದಾನದಲ್ಲೇ ಎಲ್ಲರೆದುರು ಬೈದು ಅವಮಾನ ಮಾಡಿದ್ದರು. ಇದೀಗ ರಾಹುಲ್ ಡೆಲ್ಲಿ ತಂಡದ ಪರ ಆಡುತ್ತಿದ್ದಾರೆ.
ಹಳೆಯ ತಂಡ ಲಕ್ನೋ ವಿರುದ್ಧ ನಿನ್ನೆ ಪಂದ್ಯ ಗೆಲ್ಲಿಸಿದ ಬಳಿಕ ರಾಹುಲ್ ಮೈದಾನದಿಂದ ತೆರಳುವಾಗ ಎದುರಾಳಿ ತಂಡದವರಿಗೆ ಕೈ ಕುಲುಕುತ್ತಿದ್ದರು. ಈ ವೇಳೆ ತಮ್ಮ ಎದುರು ಬಂದ ಸಂಜೀವ್ ಗೊಯೆಂಕಾಗೆ ಕಾಟಾಚಾರಕ್ಕೆ ಕೈ ಕುಲುಕಿ ಅವರ ಪಕ್ಕದಲ್ಲಿದ್ದ ಲಕ್ನೋ ಸಿಬ್ಬಂದಿ ಬಳಿ ಮಾತನಾಡಿದರು. ಇತ್ತ ಸಂಜೀವ್ ಏನೋ ಹೇಳಲು ಯತ್ನಿಸಿದರೂ ರಾಹುಲ್ ಕಡೆಗಣಿಸಿ ಮುನ್ನಡೆದರು.
ಇದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಹಿಂದೆ ಮಾಡಿದ ಅವಮಾನವನ್ನು ರಾಹುಲ್ ಮರೆತಿಲ್ಲ ಎಂದು ಕೆಲವರು ಹೇಳಿದರೆ, ಅಹಂಕಾರಕ್ಕೆ ತಕ್ಕ ಶಾಸ್ತಿ ಮಾಡಿದ್ದಾರೆ ಎಂದಿದ್ದಾರೆ. ಅವಮಾನ ಮಾಡಿದ ಮೇಲೆ ಯಾವ ಮುಖ ಇಟ್ಕೊಂಡು ಕೈಕುಲುಕಲು ಬಂದೆ ಎಂಬಂತಿತ್ತು ಈ ದೃಶ್ಯ.