ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ಅದ್ಭುತವಾಗಿ ಬ್ಯಾಟಿಂಗ್ ನಡೆಸುತ್ತಿದೆ. ಅದರಲ್ಲೂ ಕೆಎಲ್ ರಾಹುಲ್ ಮನಮೋಹಕ ಹೊಡೆತಗಳ ಮೂಲಕ ರಂಜಿಸುತ್ತಿದ್ದಾರೆ.
ಭಾರತ ಇತ್ತೀಚೆಗಿನ ವರದಿ ಬಂದಾಗ ವಿಕೆಟ್ ನಷ್ಟವಿಲ್ಲದೇ 84 ರನ್ ಗಳಿಸಿದೆ. ಈ ಪೈಕಿ ಯಶಸ್ವಿ ಜೈಸ್ವಾಲ್ 42 ಮತ್ತು ಕೆಎಲ್ ರಾಹುಲ್ 34 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಸರಣಿಗೆ ಮೊದಲು ಕೆಎಲ್ ರಾಹುಲ್ ಫಾರ್ಮ್ ಎಲ್ಲರ ಟೀಕೆಗೆ ಗುರಿಯಾಗಿತ್ತು.
ಆದರೆ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಓಪನರ್ ಆಗಿ ಕಣಕ್ಕಿಳಿದಿರುವ ರಾಹುಲ್ ಪಕ್ಕಾ ಟೆಸ್ಟ್ ಶೈಲಿಯ ಇನಿಂಗ್ಸ್ ಆಡುತ್ತಿದ್ದಾರೆ. ಮೊದಲ ಇನಿಂಗ್ಸ್ ನಲ್ಲೂ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ್ದ ರಾಹುಲ್ 26 ರನ್ ಗಳಿಸುವಷ್ಟರಲ್ಲಿ ಅಂಪಾಯರ್ ತಪ್ಪು ತೀರ್ಪಿಗೆ ಬಲಿಯಾಗಿದ್ದರು.
ಎರಡನೇ ಇನಿಂಗ್ಸ್ ನಲ್ಲೂ ಅದೇ ಕ್ಲಾಸಿಕ್ ಟಚ್ ಮುಂದುವರಿಸಿದ್ದಾರೆ. ಇದುವರೆಗೆ 70 ಎಸೆತ ಎದುರಿಸಿರುವ ರಾಹುಲ್ 3 ಬೌಂಡರಿಗಳೊಂದಿಗೆ 34 ರನ್ ಗಳಿಸಿದ್ದಾರೆ. ಅದರಲ್ಲೂ ಅವರ ನೇರ ಹೊಡೆತವೊಂದು ಮನಮೋಹಕವಾಗಿತ್ತು. ಆರಂಭಿಕ ಸ್ಥಾನ ಕೊಟ್ಟರೆ ತಾನು ಕ್ಲಿಕ್ ಆಗಬಲ್ಲೆ ಎಂಬುದನ್ನು ರಾಹುಲ್ ಮತ್ತೊಮ್ಮೆ ನಿರೂಪಿಸಿದ್ದಾರೆ.