ಮೆಲ್ಬೊರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸುತ್ತಿರುವಾಗ ಕೆಎಲ್ ರಾಹುಲ್ ರೂಪದಲ್ಲಿ ಟೀಂ ಇಂಡಿಯಾಕ್ಕೆ ಆತಂಕ ಎದುರಾಗಿದೆ.
ಟೆಸ್ಟ್ ಸರಣಿಯಲ್ಲಿ 1-2 ರಿಂದ ಹಿನ್ನಡೆ ಅನುಭವಿಸಿರುವ ಭಾರತಕ್ಕೆ ಇದೀಗ ಮುಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡವಿದೆ. ಈ ನಡುವೆ ಭಾರತಕ್ಕೆ ಈ ಸರಣಿಯಲ್ಲಿ ಏಕೈಕ ಆಶಾಕಿರಣವೆಂದರೆ ಕೆಎಲ್ ರಾಹುಲ್. ಎಲ್ಲಾ ಪಂದ್ಯಗಳಲ್ಲೂ ಅವರು ಉತ್ತಮವಾಗಿ ಆಡಿದ್ದಾರೆ.
ಆದರೆ ಇಂದು ಅಭ್ಯಾಸದ ವೇಳೆ ಅವರು ಕೈಗೆ ಗಾಯ ಮಾಡಿಕೊಂಡಿದ್ದಾರೆ. ಮೆಲ್ಬೊರ್ನ್ ಪಂದ್ಯಕ್ಕೆ ಇಂದು ಟೀಂ ಇಂಡಿಯಾ ಅಭ್ಯಾಸ ನಡೆಸುತ್ತಿತ್ತು. ಕೆಎಲ್ ರಾಹುಲ್ ಕೂಡಾ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ಅವರ ಕೈಗೆ ಬಾಲ್ ತಾಗಿದೆ.