Select Your Language

Notifications

webdunia
webdunia
webdunia
webdunia

ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಮನಸೆಳೆದ ಬಾಲಕಿಯ ಬೌಲಿಂಗ್: ವಿಡಿಯೋ ನೋಡಿ

Rajasthani girl bowling

Krishnaveni K

ಮುಂಬೈ , ಶನಿವಾರ, 21 ಡಿಸೆಂಬರ್ 2024 (12:12 IST)
Photo Credit: X
ಮುಂಬೈ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ರಾಜಸ್ಥಾನಿ ಬಾಲಕಿಯ ಬೌಲಿಂಗ್ ಆಕ್ಷನ್ ಗೆ ಈಗ ಸ್ವತಃ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಫಿದಾ ಆಗಿದ್ದಾರೆ.

ರಾಜಸ್ಥಾನದ 13 ವರ್ಷದ ಸುಶೀಲಾ ಮೀನಾ ಎಂಬ ಬಾಲಕಿಯ ಬೌಲಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಥೇಟ್ ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ಶೈಲಿಯಲ್ಲಿ ಸುಶೀಲಾ ಮೀನಾ ಕರಾರುವಾಕ್ ಆಗಿ ಬೌಲಿಂಗ್ ನಡೆಸುತ್ತಾಳೆ.

ವೇಗದ ಜೊತೆಗೆ ಆಕೆಯ ಬೌಲಿಂಗ್ ಕೂಡಾ ನಿಖರವಾಗಿದೆ. ಈಕೆಯ ಬೌಲಿಂಗ್ ವಿಡಿಯೋ ನೋಡಿ ಅನೇಕರು ಮುಂದೊಂದು ದಿನ ಈಕೆ ಭಾರತ ತಂಡಕ್ಕೆ ಬರುವುದು ಖಂಡಿತಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿರುವ ಸಚಿನ್ ತೆಂಡುಲ್ಕರ್ ಅದ್ಭುತ ಬೌಲಿಂಗ್ ಎಂದು ಕೊಂಡಾಡಿರುವುದಲ್ಲದೆ, ಜಹೀರ್ ಖಾನ್ ಗೂ ನೋಡುವಂತೆ ಸಲಹೆ ನೀಡಿದ್ದಾರೆ.

ಜಹೀರ್ ಕೂಡಾ ಬಾಲಕಿಯ ಬೌಲಿಂಗ್ ಆಕ್ಷನ್ ವೀಕ್ಷಿಸಿ ಕಾಮೆಂಟ್ ಮಾಡಿದ್ದಾರೆ. ಸಚಿನ್ ವಿಡಿಯೋಗೆ ಕಾಮೆಂಟ್ ಮಾಡಿರುವ ಜಹೀರ್ ‘ನಿಮ್ಮ ಗಮನ ಬಿದ್ದಿದೆ ಎಂದ ಮೇಲೆ ಎರಡು ಮಾತೇ ಇಲ್ಲ. ಬಾಲಕಿಯ ಬೌಲಿಂಗ್ ತುಂಬಾ ಸ್ಮೂತ್ ಮತ್ತು ಗಮನಸೆಳೆಯುವಂತಿದೆ. ಈಕೆ ಭವಿಷ್ಯದ ತಾರೆಯಾಗುತ್ತಾಳೆ’ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಬಿಟ್ಟು ದುಬೈನಲ್ಲಿರುವ ಕ್ರಿಕೆಟಿಗ ರಾಬಿನ್ ಉತ್ತಪ್ಪಗೆ ಅರೆಸ್ಟ್ ವಾರೆಂಟ್