ಮುಂಬೈ: ತಮ್ಮ ಕ್ರಿಕೆಟ್ ಗುರು ರಮಾಕಾಂತ್ ಅಚ್ರೇಕರ್ ಸ್ಮರಣಾರ್ಥ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಒಂದು ಕಾಲದ ಕುಚಿಕು ಗೆಳಯರಾದ ವಿನೋದ್ ಕಾಂಬ್ಳಿಯವರನ್ನು ಸಚಿನ್ ತೆಂಡುಲ್ಕರ್ ಭೇಟಿಯಾಗಿದ್ದಾರೆ.
ಗುರುಗಳ ಸ್ಮರಣಾರ್ಥ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿನೋದ್ ಕಾಂಬ್ಳಿ ಮೊದಲೇ ವೇದಿಕೆಯಲ್ಲಿ ಕೂತಿದ್ದರು. ಎಲ್ಲರಿಗೂ ಗೊತ್ತಿರುವ ಹಾಗೆ ವಿನೋದ್ ಕಾಂಬ್ಳಿ ಇತ್ತೀಚೆಗೆ ಎದ್ದು ಓಡಾಡಲೂ ಆಗದಷ್ಟು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕುಡಿತದಿಂದಾಗಿಯೇ ಅವರು ತಮ್ಮ ವೃತ್ತಿ ಜೀವನವನ್ನೂ ಹಾಳುಮಾಡಿಕೊಂಡಿದ್ದರು.
ವೇದಿಕೆಗೆ ನಂತರ ಬಂದ ಸಚಿನ್, ವಿನೋದ್ ಕೂತಿರುವುದನ್ನು ನೋಡಿ ತಾವೇ ಬಳಿ ಹೋಗಿ ಮಾತನಾಡಿಸಿದ್ದಾರೆ. ವಿನೋದ್ ಕಾಂಬ್ಳಿ ಎಷ್ಟು ಅನಾರೋಗ್ಯಕ್ಕೀಡಾಗಿದ್ದಾರೆ ಎಂದರೆ ಅವರಿಗೆ ಮೊದಲು ಸಚಿನ್ ರನ್ನು ಗುರುತಿಸಲೂ ಕಷ್ಟವಾದಂತೆ ಕಾಣುತ್ತಿದೆ. ನಂತರ ಸಚಿನ್ ರನ್ನು ನೋಡಿ ಕೈ ಹಿಡಿದು ಎಳೆದಾಡಿದ್ದಾರೆ.
ಸಚಿನ್ ಗೆ ಅತ್ತ ಹೋಗದೇ ತನ್ನ ಪಕ್ಕವೇ ಕುಳಿತುಕೊಳ್ಳುವಂತೆ ಎಳೆದಾಡಿದ್ದಾರೆ. ಗೆಳೆಯ ಎಳೆದಾಡುತ್ತಿರುವಾಗ ಸಚಿನ್ ಕೊಂಚ ಗಲಿಬಿಲಿಯಾಗಿದ್ದಾರೆ. ಬಳಿಕ ಪಕ್ಕದಲ್ಲಿದ್ದವರು ಸಚಿನ್ ನೆರವಿಗೆ ಬಂದಿದ್ದಾರೆ. ಬಳಿಕ ಸಚಿನ್ ವೇದಿಕೆಯಲ್ಲಿ ಇನ್ನೊಂದು ಕುರ್ಚಿಯಲ್ಲಿ ಹೋಗಿ ಕುಳಿತುಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾಕಷ್ಟು ಫನ್ನಿ ಕಾಮೆಂಟ್ ಗಳು ಬಂದಿವೆ.