ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿಯೇ ಮುಂದಿನ ನಾಯಕ ಎಂದು ಹಿರಿಯ ಸ್ಪಿನ್ನರ್ ರವಿಚಂಧ್ರನ್ ಅಶ್ವಿನ್ ಭವಿಷ್ಯ ನುಡಿದಿದ್ದಾರೆ.
ಚೆನ್ನೈ ಐಪಿಎಲ್ ತಂಡದ ಆಟಗಾರರಾಗಿರುವ ರವಿಚಂದ್ರನ್ ಅಶ್ವನ್ ತಮ್ಮದೇ ಯೂ ಟ್ಯೂಬ್ ಚಾನೆಲ್ ಹೊಂದಿದ್ದು ಕ್ರೀಡಾ ವಿಶ್ಲೇಷಣೆಯನ್ನೂ ನಡೆಸುತ್ತಿರುತ್ತಾರೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ನಾಯಕ ಯಾರು ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.
ನನ್ನ ಪ್ರಕಾರ ವಿರಾಟ್ ಕೊಹ್ಲಿಯೇ ಆರ್ ಸಿಬಿ ಮುಂದಿನ ಕ್ಯಾಪ್ಟನ್ ಎಂದಿದ್ದಾರೆ. ಯಾಕೆಂದರೆ ಆರ್ ಸಿಬಿ ಈ ಬಾರಿ ಹರಾಜಿನಲ್ಲಿ ಕ್ಯಾಪ್ಟನ್ ಆಗಬಲ್ಲ ಆಟಗಾರನನ್ನು ಖರೀದಿಸಿಲ್ಲ. ಬೇರೆ ಯಾರಿಗೋ ನಾಯಕನ ಪಟ್ಟ ನೀಡುವ ಬದಲು ಅವರು ವಿರಾಟ್ ಕೊಹ್ಲಿಯನ್ನೇ ನಾಯಕನಾಗಿ ಆಯ್ಕೆ ಮಾಡುವ ಸಾಧ್ಯತೆಯೇ ಹೆಚ್ಚು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ಅಷ್ಟೇ ಅಲ್ಲದೆ, ಆರ್ ಸಿಬಿ ಈ ಬಾರಿ ಹರಾಜಿನಲ್ಲಿ ಸರಿಯಾಗಿ ಯೋಚಿಸಿ ಹೆಜ್ಜೆಯಿಡುವ ಮೂಲಕ ಉತ್ತಮ ತಂಡವನ್ನೇ ಕಟ್ಟಿಕೊಂಡಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ದುಡ್ಡು, ಖ್ಯಾತಿ ನೋಡುವುದಕ್ಕಿಂತ ತಮ್ಮ ತಂಡಕ್ಕೆ ಏನು ಬೇಕು ಎಂಬುದನ್ನು ಯೋಚಿಸಿಯೇ ಆಟಗಾರರನ್ನು ಖರೀದಿ ಮಾಡಿದ್ದಾರೆ ಎಂದು ಅಶ್ವಿನ್ ಹೊಗಳಿದ್ದಾರೆ.