Select Your Language

Notifications

webdunia
webdunia
webdunia
webdunia

ರವಿಚಂದ್ರನ್ ಅಶ್ವಿನ್ ನಿವೃತ್ತಿ ಜಸ್ಟ್ ಟ್ರೈಲರ್, ಪಿಕ್ಚರ್ ಇನ್ನೂ ಬಾಕಿಯಿದೆ

Team India

Krishnaveni K

ಮುಂಬೈ , ಗುರುವಾರ, 19 ಡಿಸೆಂಬರ್ 2024 (12:15 IST)
ಮುಂಬೈ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ನಿನ್ನೆಯಷ್ಟೇ ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ ಗುಡ್ ಬೈ ಹೇಳಿದ್ದಾರೆ. ಆದರೆ ಇದು ಜಸ್ಟ್ ಟ್ರೈಲರ್ ಪಿಕ್ಚರ್ ಇನ್ನೂ ಬಾಕಿಯಿದೆ ಎನ್ನಲಾಗಿದೆ.
 

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗರ ಮೇಲೆ ಈಗ ನಿವೃತ್ತಿಯ ಕತ್ತಿ ತೂಗುತ್ತಿದೆ. ಕೆಲವರಿಗೆ ಆಸ್ಟ್ರೇಲಿಯಾ ಸರಣಿ ಮತ್ತೆ ಕೆಲವರಿಗೆ ಇಂಗ್ಲೆಂಡ್ ಟೆಸ್ಟ್ ಸರಣಿ ವೇಳೆಗೆ ನಿವೃತ್ತಿಯಾಗಲು ಈಗಾಗಲೇ ಡೆಡ್ ಲೈನ್ ನೀಡಲಾಗಿದೆ ಎನ್ನಲಾಗಿದೆ.

ಅದರಂತೆ ಈಗ ಅಶ್ವಿನ್ ರೂಪದಲ್ಲಿ ಮೊದಲ ವಿಕೆಟ್ ಪತನವಾಗಿದೆ. ಮುಂದಿನ ಟೆಸ್ಟ್ ಪಂದ್ಯಗಳಲ್ಲೂ ಅವರು ತಂಡದ ಭಾಗವಾಗಿರಲ್ಲ ಎಂಬ ಸೂಚನೆ ಹಿನ್ನಲೆಯಲ್ಲೇ ಅಶ್ವಿನ್ ನಿವೃತ್ತಿಯಾಗಿದ್ದಾರೆ ಎನ್ನಲಾಗಿದೆ.

ತಂಡದಲ್ಲಿ ಈಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾಗೂ ಡೆಡ್ ಲೈನ್ ಇದೆ ಎನ್ನಲಾಗಿದೆ. ಈ ಮೂವರೂ ಟಿ20 ಫಾರ್ಮ್ಯಾಟ್ ಗೆ ಗುಡ್ ಬೈ ಹೇಳಿದ್ದಾರೆ. ಇದೀಗ ಟೆಸ್ಟ್ ಮಾದರಿಯಲ್ಲೂ ಕೊಹ್ಲಿ, ರೋಹಿತ್ ಮೊದಲಿನಂತೆ ರನ್ ಗಳಿಸುತ್ತಿಲ್ಲ. ಹೀಗಾಗಿ ಅವರಿಗೆ ಇಂಗ್ಲೆಂಡ್ ಟೆಸ್ಟ್ ಸರಣಿ ಕೊನೆಯ ಸರಣಿಯಾಗಿರಬಹುದು ಎನ್ನಲಾಗುತ್ತಿದೆ.

ರವೀಂದ್ರ ಜಡೇಜಾ ಈಗಲೂ ತಂಡಕ್ಕೆ ಉಪಯುಕ್ತ ಕೊಡುಗ ನೀಡುತ್ತಿರುವುದರಿಂದ ಅವರು ಮುಂದುವರಿಯುವ ಸಾಧ್ಯತೆಯಿದೆ. ಇವರಲ್ಲದೆ ಈಗಾಗಲೇ ತಂಡದಲ್ಲಿ ಅವಕಾಶ ಸಿಗದ ಅಜಿಂಕ್ಯಾ ರೆಹಾನೆ, ಚೇತೇಶ್ವರ ಪೂಜಾರ ಮುಂತಾದ ಕ್ರಿಕೆಟಿಗರು ಸದ್ಯದಲ್ಲೇ ನಿವೃತ್ತಿ ಘೋಷಿಸಲಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಈಗ ಪರಿವರ್ತನೆಯ ಕಾಲದಲ್ಲಿದೆ ಎನ್ನಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ನಿವೃತ್ತಿ ಬಳಿಕ ರವಿಚಂದ್ರನ್ ಮುಂದಿನ ಭವಿಷ್ಯವೇನು: ಸುಳಿವು ಕೊಟ್ಟ ಕ್ರಿಕೆಟಿಗ