IND vs AUS: ಟೀಂ ಇಂಡಿಯಾ ಬ್ಯಾಟರ್ ಗಳ ಪೆರೇಡ್ ನಲ್ಲಿ ಕೆಎಲ್ ರಾಹುಲ್ ಏಕಾಂಗಿ ಹೋರಾಟ

Select Your Language

Notifications

webdunia
webdunia
webdunia
शुक्रवार, 20 दिसंबर 2024
webdunia

IND vs AUS: ಟೀಂ ಇಂಡಿಯಾ ಬ್ಯಾಟರ್ ಗಳ ಪೆರೇಡ್ ನಲ್ಲಿ ಕೆಎಲ್ ರಾಹುಲ್ ಏಕಾಂಗಿ ಹೋರಾಟ

Virat Kohli

Krishnaveni K

ಬ್ರಿಸ್ಬೇನ್ , ಸೋಮವಾರ, 16 ಡಿಸೆಂಬರ್ 2024 (10:22 IST)
Photo Credit: X
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್ ಗಳ ಪೆವಿಲಿಯನ್ ಪೆರೇಡ್ ನಡೆಯುತ್ತಿದ್ದರೆ ಕೆಎಲ್ ರಾಹುಲ್ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ನಲ್ಲಿ 445 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಆದರೆ ಟೀಂ ಇಂಡಿಯಾ ಇದಕ್ಕೆ ದಿಟ್ಟ ಉತ್ತರ ನೀಡುವುದು ಬಿಡಿ, ಹೋರಾಟದ ಮನೋಭಾವವನ್ನೂ ತೋರದೇ ಬಾಲ ಮುದುರಿಕೊಂಡಿದೆ. ಇನ್ನೂ ತಂಡದ ಮೊತ್ತ 50 ರನ್ ಗಳಾಗಿಲ್ಲ. ಆಗಲೇ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಇತ್ತೀಚೆಗಿನ ವರದಿ ಬಂದಾಗ 4 ವಿಕೆಟ್ ಕಳೆದುಕೊಂಡು 48 ರನ್ ಗಳಿಸಿದೆ. ಮಳೆಯ ಅಡಚಣೆಯಿಂದಾಗಿ ಪಂದ್ಯ ಸದ್ಯಕ್ಕ ಸ್ಥಗಿತವಾಗಿದೆ. ಈ ಪಂದ್ಯದಲ್ಲಿ ಭಾರತ ಸೋಲಬಾರದೆಂದರೆ ಮಳೆಯೇ ಕಾಪಾಡಬೇಕು.

ಕೆಎಲ್ ರಾಹುಲ್ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದಾರೆ. 52 ಎಸೆತಗಳಿಂದ 30 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನೂ ಖಾತೆ ತೆರೆಯದೇ ಇರುವ ರೋಹಿತ್ ಶರ್ಮಾ ಕ್ರೀಸ್ ನಲ್ಲಿದ್ದಾರೆ.

ಉಳಿದಂತೆ ಯಶಸ್ವಿ ಜೈಸ್ವಾಲ್ 4, ಶುಬ್ಮನ್ ಗಿಲ್ 1, ವಿರಾಟ್ ಕೊಹ್ಲಿ 3, ರಿಷಭ್ ಪಂತ್ 9 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಭಾರತ ಇನ್ನೂ 397 ರನ್ ಗಳ ಹಿನ್ನಡೆಯಲ್ಲಿದೆ. ಮತ್ತೆ ಟಾಪ್ ಆರ್ಡರ್ ಬ್ಯಾಟಿಂಗ್ ಕೈ ಕೊಟ್ಟಿರುವುದು ನೋಡಿದರೆ ತಂಡದ ಬ್ಯಾಟಿಂಗ್ ಗೆ ಭರ್ಜರಿ ಸರ್ಜರಿ ಮಾಡುವ ಅಗತ್ಯವಿದೆ ಎನಿಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs AUS: ಇತಿಹಾಸ ನಿರ್ಮಿಸಿದ ಜಸ್ಪ್ರೀತ್ ಬುಮ್ರಾ