Select Your Language

Notifications

webdunia
webdunia
webdunia
webdunia

IND vs AUS: ಟ್ರಾವಿಸ್ ಹೆಡ್ ಅಬ್ಬರದ ಶತಕದ ಮುಂದೆ ಬೆಪ್ಪಾದ ರೋಹಿತ್ ಶರ್ಮಾ ಕ್ಯಾಪ್ಟನ್ಸಿ

IND vs AUS

Krishnaveni K

ಬ್ರಿಸ್ಬೇನ್ , ಭಾನುವಾರ, 15 ಡಿಸೆಂಬರ್ 2024 (10:45 IST)
Photo Credit: X
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ಹೀನಾಯ ಪ್ರದರ್ಶನ ಮುಂದುವರಿದಿದೆ. ಟ್ರಾವಿಸ್ ಹೆಡ್ ಸತತ ಎರಡನೇ ಶತಕ ಸಿಡಿಸಿದ್ದಾರೆ. ಇವರ ಮುಂದೆ ರೋಹಿತ್ ಕ್ಯಾಪ್ಟನ್ಸಿ ತೀರಾ ಸಪ್ಪೆ ಎನಿಸಿದೆ.

ದ್ವಿತೀಯ ದಿನವಾದ ಇಂದು ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ನಲ್ಲಿ ಇತ್ತೀಚೆಗಿನ ವರದಿ ಬಂದಾಗ 3 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿದೆ. ಟ್ರಾವಿಸ್ ಹೆಡ್ ಮತ್ತೊಂದು ಅಬ್ಬರದ ಶತಕ ಸಿಡಿಸಿದ್ದಾರೆ. ಕಳೆದ ಪಂದ್ಯದಲ್ಲೂ ಅವರು ಶತಕ ಸಿಡಿಸಿದ್ದರು. ಅವರಿಗೆ ಸಾಥ್ ನೀಡುತ್ತಿರುವ ಸ್ಟೀವ್ ಸ್ಮಿತ್ 65 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಇದಕ್ಕೆ ಮೊದಲು ಉಸ್ಮಾನ್ ಖವಾಜ 21, ನಥನ್ ಮೆಕ್ ಸ್ವೀನೇ 9, ಲಬುಶೇನ್ 12 ರನ್ ಗಳಿಸಿ ಔಟಾದರು. ಭಾರತದ ಪರ ಜಸ್ಪ್ರೀತ್ ಬುಮ್ರಾ 2, ನಿತೀಶ್ ಕುಮಾರ್ ರೆಡ್ಡಿ 1 ವಿಕೆಟ್ ಕಬಳಿಸಿದ್ದಾರೆ. ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು. ನಿನ್ನೆಯ ದಿನ ಮಳೆಯಿಂದಾಗಿ ಕೇವಲ 13 ಓವರ್ ಗಳ ಪಂದ್ಯ ನಡೆದಿತ್ತು.

ಆದರೆ ಇಂದು ಪೂರ್ಣ ದಿನದ ಪಂದ್ಯ ನಡೆಯುವ ನಿರೀಕ್ಷೆಯಿದೆ. ಮೊದಲ ಎರಡು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಕೈ ಸುಟ್ಟುಕೊಂಡಿದ್ದ ಟೀಂ ಇಂಡಿಯಾ ಈ ಪಂದ್ಯದಲ್ಲಿ ಫೀಲ್ಡಿಂಗ್ ಆಯ್ದುಕೊಂಡಿತ್ತು. ಆದರೂ ಟ್ರಾವಿಸ್ ಹೆಡ್ ಅಬ್ಬರಿಸುವಾಗ ಆಕ್ರಮಣಕಾರೀ ಫೀಲ್ಡ್ ಸೆಟ್ ಮಾಡದೇ ತೀರಾ ರಕ್ಷಣಾತ್ಮಕ ತಂತ್ರಕ್ಕೆ ರೋಹಿತ್ ಮೊರೆ ಹೋಗುತ್ತಿದ್ದಾರೆಯೇ ಎಂಬ ಅನುಮಾನ ಶುರುವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs AUS: ಮಳೆಯಿಂದ ಆಟವಂತೂ ಹಾಳಾಯ್ತು, ಬಾ ತಿನ್ನೋಣ ಗುರು ಎಂದ ಕೆಎಲ್ ರಾಹುಲ್, ಕೊಹ್ಲಿ