ಬ್ರಿಸ್ಬೇನ್: ಟೀಂ ಇಂಡಿಯಾ ಕಂಡ ಅದ್ಭುತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ ಗುಡ್ ಬೈ ಹೇಳಿದ್ದಾರೆ. ಹಾಗಿದ್ದರೆ ಅವರ ಮುಂದಿನ ಹಾದಿ ಏನು ಎಂಬ ಬಗ್ಗೆ ಎಲ್ಲರಲ್ಲಿ ಕುತೂಹಲವಿದೆ.
ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಣೆ ಬಳಿಕ ನಾನು ಇನ್ನು ಮುಂದೆ ಕ್ಲಬ್ ಲೆವೆಲ್ ಕ್ರಿಕೆಟ್ ಅಡಿಕೊಂಡಿರುತ್ತೇನೆ ಎಂದಿದ್ದಾರೆ. ಹೀಗಾಗಿ ಮುಂದೆ ಒಂದು ಅಥವಾ ಎರಡು ವರ್ಷ ಅಶ್ವಿನ್ ಐಪಿಎಲ್ ಆಡಬಹುದು. ಯಾಕೆಂದರೆ ಅವರಿಗೆ ಈಗಾಗಲೇ 38 ವರ್ಷವಾಗಿದೆ.
ಇದಾದ ಬಳಿಕ ವಿದೇಶೀ ಲೀಗ್ ನಲ್ಲಿ ಭಾಗಿಯಾಗಲೂ ಬಹುದು. ಸುರೇಶ್ ರೈನಾ, ಯುವರಾಜ್ ಸಿಂಗ್ ರಂತೆ ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಬಹುದು. ಯಾಕೆಂದರೆ ಅಶ್ವಿನ್ ಗೆ ಕ್ರಿಕೆಟ್ ಮೇಲೆ ಅತಿಯಾದ ಪ್ರೀತಿಯಿದೆ ಎನ್ನುವುದು ಅವರ ಮಾತಿನಿಂದಲೇ ಗೊತ್ತಾಗುತ್ತದೆ.
ನಿವೃತ್ತಿ ಘೋಷಣೆ ಸಂದರ್ಭದಲ್ಲಿ ನಾನು ಆಡುವುದರಿಂದ ನಿವೃತ್ತಿಯಾಗುತ್ತಿದ್ದೇನಷ್ಟೇ ಹೊರತು ಕ್ರಿಕೆಟ್ ಲೋಕದಲ್ಲೇ ನಿಮ್ಮ ಜೊತೆಗೆ ಇರುತ್ತೇನೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಹೀಗಾಗಿ ಅಶ್ವಿನ್ ಖಂಡಿತವಾಗಿಯೂ ಮುಂದೆ ಒಬ್ಬ ಕ್ರಿಕೆಟ್ ವಿಶ್ಲೇಷಕ ಅಥವಾ ಕಾಮೆಂಟೇಟರ್ ಆಗಿ ಮುಂದುವರಿಯಬಹುದು ಎಂಬ ಸುಳಿವ ನೀಡಿದ್ದಾರೆ. ಈಗಾಗಲೇ ಅವರು ತಮ್ಮದೇ ಯೂ ಟ್ಯೂಬ್ ಚಾನೆಲ್ ಹೊಂದಿದ್ದು ಕ್ರಿಕೆಟ್ ಕುರಿತಾದ ವಿಶ್ಲೇಷಣೆ ಮಾಡುತ್ತಿರುತ್ತಾರೆ. ಹೀಗಾಗಿ ಮುಂದೆಯೂ ಅಶ್ವಿನ್ ರನ್ನು ಈ ಫೀಲ್ಡ್ ನಲ್ಲಿ ನೋಡಬಹುದು.