Select Your Language

Notifications

webdunia
webdunia
webdunia
webdunia

ರವಿಚಂದ್ರನ್ ಅಶ್ವಿನ್ ನಿವೃತ್ತಿ ಭಾಷಣದಲ್ಲಿ ಏನು ಹೇಳಿದ್ರು ಇಲ್ಲಿದೆ ಭಾವುಕ ಮಾತುಗಳು

r ashwin

Krishnaveni K

ಬ್ರಿಸ್ಬೇನ್ , ಬುಧವಾರ, 18 ಡಿಸೆಂಬರ್ 2024 (12:10 IST)
ಬ್ರಿಸ್ಬೇನ್: ಟೀಂ ಇಂಡಿಯಾ ಕಂಡ ಶ್ರೇಷ್ಠ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಮೂರನೇ ಟೆಸ್ಟ್ ಪಂದ್ಯದ ನಂತರ ಅಧಿಕೃತವಾಗಿ ವಿದಾಯ ಘೋಷಿಸಿದ ಅವರು ತಮ್ಮನ್ನು ಬೆಂಬಲಿಸಿದ್ದಕ್ಕೆ ಭಾವುಕರಾಗಿ ಮಾತನಾಡಿದ್ದಾರೆ. ಅವರ ಭಾಷಣದ ತುಣುಕು ಇಲ್ಲಿದೆ ನೋಡಿ.

‘ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇದು ನನ್ನ ಕೊನೆಯ ವರ್ಷವಾಗಿದೆ. ನನ್ನಲ್ಲಿ ಇನ್ನು ಸ್ವಲ್ಪವೇ ಕ್ರಿಕೆಟ್ ಉಳಿದಿದ್ದು ಅದನ್ನು ನಾನು ದೇಶೀಯ ಕ್ರಿಕೆಟ್ ನಲ್ಲಿ ಕಳೆಯಬೇಕೆಂದಿದ್ದೇನೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇದು ನನ್ನ ಕೊನೆಯ ದಿನ. ರೋಹಿತ್ ಹಾಗು ಇತರೆ ಆಟಗಾರರೊಂದಿಗೆ ನಾನು ಸಾಕಷ್ಟು ಫನ್ ಮಾಡಿದ್ದೇನೆ. ಕಳೆದ ಕೆಲವು ವರ್ಷಗಳಲ್ಲಿ ಹಲವರನ್ನು ಕಳೆದುಕೊಂಡಿದ್ದೇವೆ, ಕೆಲವೊಬ್ಬರು ನಿಜವಾಗಿಯೂ ‘ಒಜಿ’ ಆಗಿದ್ದರು. ಈವತ್ತು ಈ ದಿನ ಡ್ರೆಸ್ಸಿಂಗ್ ರೂಂನಲ್ಲಿ ನನ್ನ ಕೊನೆಯ ದಿನ ಎಂದು ಹೇಳಲು ಬಯಸುತ್ತೇನೆ. ಈ ದಿನ ನಾನು ಹಲವರಿಗೆ ಧನ್ಯವಾದ ಹೇಳಬೇಕಿದೆ. ವಿಶೇಷವಾಗಿ ಬಿಸಿಸಿಐಗೆ ಮತ್ತು ನನ್ನ ತಂಡದ ಸಹ ಆಟಗಾರರಿಗೆ, ನನ್ನ ಪ್ರಯಾಣದ ಭಾಗವಾಗಿದ್ದ ಕೋಚ್ ಗಳು, ವಿಶೇಷವಾಗಿ ರೋಹಿತ್, ವಿರಾಟ್, ಅಜಿಂಕ್ಯಾ, ಪುಜಾರ ಮೊದಲಾದವರು ನನ್ನ ಹಲವು ಕ್ಯಾಚ್ ಗಳನ್ನು ಪಡೆದು ಸಹಾಯ ಮಾಡಿದ್ದರು. ಸದಾ ಅತ್ಯುತ್ತಮ ಪೈಪೋಟಿಯನ್ನೇ ನೀಡುವ ಆಸ್ಟ್ರೇಲಿಯಾ ತಂಡಕ್ಕೂ ಧನ್ಯವಾದ ಹೇಳಬೇಕಿದೆ. ನಾನೀಗ ಯಾವುದೇ ಪ್ರಶ್ನೆಗೆ ಉತ್ತರಿಸುವ ಸ್ಥಿತಿಯಲ್ಲಿಲ್ಲ. ತುಂಬಾ ಭಾವುಕನಾಗಿದ್ದೇನೆ. ಆದರೆ ನನ್ನ ಬಗ್ಗೆ ಉತ್ತಮವಾಗಿ ಬರೆದ ಮತ್ತು ವಿಮರ್ಶೆ ಮಾಡಿದ ಎಲ್ಲಾ ಪತ್ರಕರ್ತರಿಗೂ ಧನ್ಯವಾದಗಳು.  ನನಗೆ ನೀಡಿದ ಬೆಂಬಲಕ್ಕೆ ಧನ್ಯವಾದಗಳು. ಈ ಸಂಬಂಧವನ್ನು ಹೀಗೆಯೇ ಉಳಿಸಿಕೊಳ್ಳುತ್ತೇನೆ. ಕ್ರಿಕೆಟ್ ಆಡುವುದನ್ನು ನಿಲ್ಲಿಸಿರಬಹುದು. ಆದರೆ ನಾನು ಕ್ರಿಕೆಟ್ ನೊಂದಿಗೇ ನನ್ನ ಪ್ರಯಾಣ ಮುಂದುವರಿಸಲಿದ್ದೇನೆ’

14 ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ಗೆ ಸೇವೆ ಸಲ್ಲಿಸಿದ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ 106 ಪಂದ್ಯಗಳನ್ನು ಆಡಿ 3503 ರನ್ ಮತ್ತು 537 ವಿಕೆಟ್ ಪಡೆದಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಡ್ರೆಸ್ಸಿಂಗ್ ರೂಂನಲ್ಲಿ ಕೂತು ರವಿಚಂದ್ರನ್ ಅಶ್ವಿನ್ ಕಣ್ಣೀರು: ಇಂದೇ ಬರುತ್ತಾ ಘೋಷಣೆ