Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್‌ ದಿಗ್ಗಜ ಕಪಿಲ್‌ ದೇವ್‌ ದಾಖಲೆ ಮುರಿದ ವೇಗಿ ಜಸ್‌ಪ್ರೀತ್‌ ಬೂಮ್ರಾ

Jaspreet Bumrah

Sampriya

ಬ್ರಿಸ್ಬೇನ್ , ಬುಧವಾರ, 18 ಡಿಸೆಂಬರ್ 2024 (14:04 IST)
Photo Courtesy X
ಬ್ರಿಸ್ಬೇನ್: ಇಲ್ಲಿ ನಡೆದ ಆಸ್ಟ್ರೇಲಿಯಾ- ಭಾರತ ನಡುವಿನ 3 ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವೇಗಿ ಜಸ್‌ಪ್ರೀತ್‌ ಬೂಮ್ರಾ ಅವರು ದಾಖಲೆಯೊಂದನ್ನು ತನ್ನ ಮಡಿಲಿಗೆ ಹಾಕಿಕೊಂಡಿದ್ದಾರೆ.

ಆಸ್ಟ್ರೇಲಿಯಾ ನೆಲದಲ್ಲಿ ಭಾರತ ತಂಡದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಬೂಮ್ರಾ ನಿರ್ಮಿಸಿದ್ದಾರೆ. ಈ ದಾಖಲೆ ಈವರೆಗೂ ಭಾರತದ ಕ್ರಿಕೆಟ್ ದಿಗ್ಗಜ ಕಪಿಲ್‌ದೇವ್‌ ಅವರ ಹೆಸರಿನಲ್ಲಿತ್ತು. ಈಗ ಕಪಿಲ್ ದೇವ್ ಸಾಧನೆಯನ್ನು ಮುರಿದಿದ್ದಾರೆ.

ಬ್ರಿಸ್ಬೇನ್ ನಲ್ಲಿ ನಡೆದ 3 ನೇ ಟೆಸ್ಟ್ ಪಂದ್ಯದ 2 ನೇ ಇನ್ನಿಂಗ್ಸ್ ನಲ್ಲಿ ಮಾರ್ನಸ್ ಲ್ಯಾಬುಸೇನ್‌ ಅವರ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾದ ನೆಲದಲ್ಲಿ ಭಾರತೀಯ ಬೌಲರ್ ಆಗಿ ಬೂಮ್ರಾ ಅತಿ ಹೆಚ್ಚು ವಿಕೆಟ್ ಗಳನ್ನು ಪಡೆದಿದ್ದಾರೆ. 10 ಪಂದ್ಯಗಳಲ್ಲಿ ಬೂಮ್ರಾ 53 ವಿಕೆಟ್ ಗಳನ್ನು ಕಬಳಿಸಿದ್ದಾರೆ.

ಆಸ್ಟ್ರೇಲಿಯಾ ನೆಲದಲ್ಲಿ ಕಪಿಲ್ ದೇವ್ 11 ಟೆಸ್ಟ್ ಪಂದ್ಯಗಳಲ್ಲಿ 51 ವಿಕೆಟ್ ಗಳಿಸಿದ್ದರು. ಬಾರ್ಡರ್-ಗವಾಸ್ಕರ್ ಟ್ರೋಫಿ 2024-25 ರಲ್ಲಿ ಇನ್ನೂ 2 ಟೆಸ್ಟ್ ಗಳಿರುವುದರಿಂದ ಬೂಮ್ರಾಗೆ ಇನ್ನಷ್ಟು ಸಂಖ್ಯೆಗಳನ್ನು ಹೆಚ್ಚಿಸಿಕೊಳ್ಳುವ ಅವಕಾಶ ಇದೆ.

ಉಳಿದಂತೆ ಆಸ್ಟ್ರೇಲಿಯಾ ನೆಲದಲ್ಲಿ ಅನಿಲ್ ಕುಂಬ್ಳೆ 49, ರವಿಚಂದ್ರನ್ ಅಶ್ವಿನ್ 40 ಮತ್ತು ಬಿಶನ್ ಸಿಂಗ್ ಬೇಡಿ 35 ವಿಕೆಟ್ ಗಳನ್ನು ಗಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರವಿಚಂದ್ರನ್ ಅಶ್ವಿನ್ ನಿವೃತ್ತಿ ಭಾಷಣದಲ್ಲಿ ಏನು ಹೇಳಿದ್ರು ಇಲ್ಲಿದೆ ಭಾವುಕ ಮಾತುಗಳು