ಲಖನೌ: ಕನ್ನಡಿಗ ಕೆ.ಎಲ್. ರಾಹುಲ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಂಗಳವಾರದ ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಎಂಟು ವಿಕೆಟ್‌ಗಳ ಜಯ ಸಾಧಿಸಿತು.
ಕಳೆದ ಆವೃತ್ತಿಯಲ್ಲಿ ಪಂದ್ಯವೊಂದನ್ನು ಸೋತ ಬಳಿಕ ಲಖನೌ ತಂಡದ ನಾಯಕರಾಗಿ ರಾಹುಲ್ ಅವರನ್ನು ತಂಡದ ಮಾಲೀಕ ಸಂಜೀವ್ ಗೋಯಂಕಾ ಇದೇ ಕ್ರೀಡಾಂಗಣದಲ್ಲಿ ಎಲ್ಲರ ಎದುರು ಅವಮಾನಿಸಿದ್ದರು. ಅದಕ್ಕೆ ಈಗ ರಾಹುಲ್ ಸೇಡು ತೀರಿಸಿಕೊಂಡಿದ್ದಾರೆ.
160 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡವು ಕೇವಲ 17.5 ಓವರ್‌ಗಳಲ್ಲಿ ಚೇಸ್ ಮಾಡುವ ಮೂಲಕ ಗೆದ್ದು ಬೀಗಿತು. ಮಾತ್ರವಲ್ಲ ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಅಜೇಯ 57 ರನ್ ಬಾರಿಸಿ ಲಖನೌ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.
ಲಖನೌನ ಏಕನಾ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ನಿಗದಿತ 20 ಓವರ್ಗಳಲ್ಲಿ 159 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಡೆಲ್ಲಿ ಪರವಾಗಿ ಅಮೋಘ ಬೌಲಿಂಗ್ ದಾಳಿ ನಡೆಸಿದ ಮುಖೇಶ್ ಕುಮಾರ್ 4, ಚಾಮೀರ ಹಾಗೂ ಮಿಚೆಲ್ ಸ್ಟಾರ್ಕ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
160 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕೇವಲ 17.5 ಓವರ್‌ಗಳಲ್ಲಿ ಚೇಸ್ ಮಾಡುವ ಮೂಲಕ ಗೆದ್ದು ಬೀಗಿತು. ಆರಂಭಿಕರಾದ ಅಭಿಷೇಕ್ ಪೋರೆಲ್ 51, ಕರುಣ್ ನಾಯರ್ 15, ಕೆಎಲ್ ರಾಹುಲ್ ಅಜೇಯ 57 ಹಾಗೂ ಅಕ್ಸರ್ ಪಟೇಲ್ ಅಜೇಯ 34 ರನ್ ಸಿಡಿಸುವ ಮೂಲಕ ಸುಲಭ ಜಯ ಸಾಧಿಸಿತು. ಲಖನೌ ಪರ ಏಡನ್ ಮಾರ್ಕಂ 2 ವಿಕೆಟ್ ಪಡೆದು ಮಿಂಚಿದರು. ಇಂದಿನ ಪಂದ್ಯ ಗೆಲ್ಲು ಮೂಲಕ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿಕೆ ಕಂಡಿದೆ.