Select Your Language

Notifications

webdunia
webdunia
webdunia
webdunia

ಯುವ ಅಥ್ಲೀಟ್‌ಗಳಿಗೆ ಮಿಡಿದ ಶಿವಂ ದುಬೆ ಹೃದಯ: ಆಲ್‌ರೌಂಡರ್‌ ಕ್ರಿಕೆಟಿಗನಿಂದ ಸಹಾಯಧನ ಘೋಷಣೆ

Cricketer Shivam Dubey, Chennai Super Kings, incentives for young athletes

Sampriya

ಚೆನ್ನೈ , ಮಂಗಳವಾರ, 22 ಏಪ್ರಿಲ್ 2025 (19:48 IST)
Photo Courtesy X
ಚೆನ್ನೈ: ಪ್ರತಿಭಾನ್ವಿತ ಯುವ ಅಥ್ಲೀಟ್‌ಗಳ ಕಷ್ಟಕ್ಕೆ ಭಾರತದ ಖ್ಯಾತ ಆಲ್‌ರೌಂಡ್‌ ಕ್ರಿಕೆಟಿಗನ ಹೃದಯ ಮಿಡಿದಿದೆ. 10 ಅಥ್ಲೀಟ್‌ಗಳಿಗೆ ಪ್ರೋತ್ಸಾಹಧನ ಘೋಷಣೆ ಮಾಡಿದ್ದಾರೆ.

ಭಾರತ ತಂಡದ ಆಲ್‌ರೌಂಡರ್‌ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪ್ರತಿನಿಧಿಸುವ ಶಿವಂ ದುಬೆ ಅವರು ತಮಿಳುನಾಡಿನ 10 ಮಂದಿ ಉದಯೋನ್ಮುಖ ಅಥ್ಲೀಟ್‌ಗಳಿಗೆ ತಲಾ ₹70 ಸಾವಿರ ಪ್ರೋತ್ಸಾಹಧನ ನೀಡುವುದಾಗಿ ದುಬೆ ಘೋಷಿಸಿದ್ದಾರೆ.

ತಮಿಳುನಾಡು ಕ್ರೀಡಾ ಪತ್ರಕರ್ತರ ಸಂಘವು ಆಯೋಜಿಸಿದ್ದ ಕ್ರೀಡಾಪಟುಗಳಿಗೆ ಪ್ರಶಸ್ತಿ ಮತ್ತು ಸ್ಕಾಲರ್‌ಷಿಪ್ ಪ್ರದಾನ ಕಾರ್ಯಕ್ರಮದಲ್ಲಿ ದುಬೆ ಮಾತನಾಡಿದರು.  ಸಂಘವು ಕ್ರೀಡಾಪಟುಗಳಿಗೆ ತಲಾ ₹30 ಸಾವಿರ ಸ್ಕಾಲರ್‌ಷಿಪ್ ನೀಡಿ ಗೌರವಿಸಿತು. ಇದಲ್ಲದೇ ದುಬೆ ಪ್ರತ್ಯೇಕವಾಗಿ ₹70 ಸಾವಿರ ನೀಡುವುದಾಗಿ ಘೋಷಿಸಿದರು.

₹ 30 ಸಾವಿರ ಸಣ್ಣ ಮೊತ್ತದಂತೆ ಕಾಣಬಹುದು. ಆದರೆ ಅದನ್ನು ಪಡೆದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ಪ್ರತಿಯೊಂದು ಪೈಸೆಯ ಗೌರವವೂ ದೊಡ್ಡದೇ. ಅದರಿಂದ ಪ್ರೇರಣೆಗೊಂಡು ದೊಡ್ಡ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ದುಬೆ ಕಾರ್ಯಕ್ರಮದಲ್ಲಿ ಹೇಳಿದರು.

ಪಿ.ಬಿ. ಅಭಿನಂದನ್ (ಟೇಬಲ್ ಟೆನಿಸ್), ಕೆ.ಎಸ್‌. ವೆನಿಸಾ ಶ್ರೀ (ಆರ್ಚರಿ), ಮುತ್ತುಮೀನಾ ವೆಲ್ಲಾಸಾಮಿ (ಪ್ಯಾರಾ ಅಥ್ಲೆಟಿಕ್ಸ್), ಶಮೀನಾ ರಿಯಾಜ್ (ಸ್ಕ್ವಾಷ್), ಆರ್.ಕೆ. ಜಯಂತ್, ಎಸ್‌. ನಂದನ್ (ಇಬ್ಬರೂ ಕ್ರಿಕೆಟ್), ಪಿ. ಕಮಲಿ (ಸರ್ಫಿಂಗ್), ಆರ್. ಅಭಿನಯ, ಆರ್‌.ಸಿ. ಜಿತಿನ್ ಅರ್ಜುನನ್ (ಇಬ್ಬರೂ ಅಥ್ಲೆಟಿಕ್ಸ್), ಎ. ತಕ್ಷಾಂತ್ (ಚೆಸ್) ಅವರು ಪ್ರೋತ್ಸಾಹಧನ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IPL 2025: ಆರ್‌ಸಿಬಿಯ ಪ್ಲೇ ಆಫ್‌ ಲೆಕ್ಕಾಚಾರ, ತವರಿನಲ್ಲಿ ಕನಿಷ್ಠ ಎರಡು ಪಂದ್ಯ ಗೆಲ್ಲಲೇಬೇಕಾದ ಒತ್ತಡ