Publish Date: Fri, 15 Dec 2023 (09:20 IST)
Updated Date: Fri, 15 Dec 2023 (09:29 IST)
ಕೋಲ್ಕೊತ್ತಾ: ಐಪಿಎಲ್ 2024 ರಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಶ್ರೇಯಸ್ ಅಯ್ಯರ್ ಕಮ್ ಬ್ಯಾಕ್ ಮಾಡಿದ್ದಾರೆ.
ಕಳೆದ ಸೀಸನ್ ನಲ್ಲಿ ಶ್ರೇಯಸ್ ಗಾಯದಿಂದಾಗಿ ಸಂಪೂರ್ಣವಾಗಿ ಐಪಿಎಲ್ ಮಿಸ್ ಮಾಡಿಕೊಂಡಿದ್ದರು. ಹೀಗಾಗಿ ಅವರ ಸ್ಥಾನದಲ್ಲಿ ನಿತೀಶ್ ರಾಣಾ ತಂಡದ ನಾಯಕತ್ವ ವಹಿಸಿದ್ದರು. ಆದರೆ ಈ ಬಾರಿ ಶ್ರೇಯಸ್ ಫಿಟ್ ಆಗಿ ಮರಳಿದ್ದು, ಮತ್ತೆ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
ಕಳೆದ ಸೀಸನ್ ನಲ್ಲಿ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದ ನಿತೀಶ್ ರಾಣಾ ಈ ಬಾರಿ ಉಪನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಕೆಕೆಆರ್ ಪ್ರಕಟಣೆ ತಿಳಿಸಿದೆ.
ಸುದೀರ್ಘ ಕಾಲ ಕ್ರಿಕೆಟ್ ನಿಂದ ದೂರವಿದ್ದ ಶ್ರೇಯಸ್ ಏಷ್ಯಾ ಕಪ್ ವೇಳೆ ತಂಡಕ್ಕೆ ಪುನರಾಗಮನ ಮಾಡಿದ್ದರು. ಅದಾದ ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.