ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ವಿರುದ್ಧದ ಕೊನೆಯ ಟಿ20 ಪಂದ್ಯವನ್ನು ಟೀಂ ಇಂಡಿಯಾ 106 ರನ್ ಗಳ ಅಂತರದಿಂದ ಗೆದ್ದುಕೊಂಡಿತು.
ಈ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಕುಲದೀಪ್ ಯಾದವ್ 5 ವಿಕೆಟ್ ಕಬಳಿಸಿ ವಿಶಿಷ್ಟ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕುಲದೀಪ್ ಯಾದವ್ ಗೆ ನಿನ್ನೆ ಜನ್ಮದಿನವಾಗಿತ್ತು. ಹುಟ್ಟಿದ ಹಬ್ಬದ ದಿನವೇ 5 ವಿಕೆಟ್ ಪಡೆದ ಕುಲದೀಪ್ ಯಾದವ್ ವಿಶಿಷ್ಟ ದಾಖಲೆಯನ್ನು ತಮ್ಮದಾಗಿಸಿಕೊಂಡರು. ನಿನ್ನೆಯ ಪಂದ್ಯದಲ್ಲಿ 2.5 ಓವರ್ ಬೌಲಿಂಗ್ ಮಾಡಿದ ಕುಲದೀಪ್ ಕೇವಲ 17 ರನ್ ನೀಡಿ 5 ವಿಕೆಟ್ ಕಬಳಿಸಿದರು.
ಈ ಮೂಲಕ ಪುರುಷರ ಕ್ರಿಕೆಟ್ ನಲ್ಲಿ ಬರ್ತ್ ಡೇ ದಿನವೇ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಬೌಲರ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರು. ಇದಕ್ಕೆ ಮೊದಲು ಶ್ರೀಲಂಕಾದ ವಣೀಂದು ಹಸರಂಗ ಭಾರತದ ವಿರುದ್ಧ ಹುಟ್ಟುಹಬ್ಬದ ದಿನ 4 ವಿಕೆಟ್ ಕಬಳಿಸಿ ಅಗ್ರಸ್ಥಾನದಲ್ಲಿದ್ದರು. ಅಲ್ಲದೆ ಪುರುಷರರ ಟಿ20 ಕ್ರಿಕೆಟ್ ನಲ್ಲಿ ಭಾರತದ ಪರ ಎರಡನೇ ಬಾರಿಗೆ 5 ವಿಕೆಟ್ ಕಬಳಿಸಿದ ದಾಖಲೆ ಮಾಡಿದರು.