ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಇಂದು ಜೊಹಾನ್ಸ್ ಬರ್ಗ್ ನ ವಾಂಡರರ್ಸ್ ಮೈದಾನದಲ್ಲಿ ನಡೆಯಲಿದೆ.
ಮೊದಲ ಪಂದ್ಯ ಮಳೆಗೆ ಆಹುತಿಯಾಗಿತ್ತು. ಎರಡನೇ ಪಂದ್ಯದಲ್ಲಿ ಮಳೆ ಅಡಚಣೆಯಿದ್ದರೂ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಆಟ ನಡೆದು ದ.ಆಫ್ರಿಕಾ ಭರ್ಜರಿ ಗೆಲುವು ದಾಖಲಿಸಿತ್ತು. ಇದರಿಂದ ಸರಣಿಯಲ್ಲಿ ಭಾರತ 0-1 ಅಂತರದಿಂದ ಹಿನ್ನೆಯಲ್ಲಿದೆ. ಈ ಸರಣಿ ಉಳಿಸಿಕೊಳ್ಳಲು ಇಂದು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಕಳೆದ ಪಂದ್ಯದಲ್ಲಿ ಟೀಂ ಇಂಡಿಯಾಗೆ ಬ್ಯಾಟಿಂಗ್ ನಲ್ಲಿ ಆರಂಭಕರು ಕೈಕೊಟ್ಟಿದ್ದರು. ಹಾಗಿದ್ದರೂ ಇನ್ ಫಾರ್ಮ್ ಬ್ಯಾಟಿಗ ರಿಂಕು ಸಿಂಗ್, ಸೂರ್ಯಕುಮಾರ್ ಯಾದವ್ ಅದ್ಭುತ ಬ್ಯಾಟಿಂಗ್ ನಿಂದ ಭಾರತ ಗೌರವಯುತ ಮೊತ್ತ ಕಲೆ ಹಾಕಿತ್ತು.
ಆದರೆ ಬೌಲರ್ ಗಳು ಈ ಶ್ರಮವನ್ನು ವ್ಯರ್ಥ ಮಾಡಿದ್ದರು. ಅನುಭವಿ ರವೀಂದ್ರ ಜಡೇಜಾ ಸೇರಿದಂತೆ ಎಲ್ಲರೂ ರನ್ ನಿಯಂತ್ರಿಸಲು ವಿಫಲರಾದರು. ಅರ್ಷ್ ದೀಪ ಸಿಂಗ್ ಮತ್ತೊಮ್ಮೆ ದುಬಾರಿಯಾಗಿ ಟ್ರೋಲ್ ಗೊಳಗಾದರು. ಆಫ್ರಿಕನ್ನರುನ್ನು ತವರಿನಲ್ಲಿ ಕಟ್ಟಿ ಹಾಕುವುದು ಅಷ್ಟು ಸುಲಭವಲ್ಲ. ಅದಕ್ಕೆ ಬೌಲರ್ ಗಳಿಂದ ಉತ್ತಮ ಪ್ರದರ್ಶನ ಬರಲೇಬೇಕಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8.30 ಕ್ಕೆ ಆರಂಭವಾಗಲಿದೆ.