Publish Date: Wed, 13 Dec 2023 (14:00 IST)
Updated Date: Wed, 13 Dec 2023 (14:00 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಪತ್ನಿ ರಿತಿಕಾ ಸಜ್ ದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ ಎಂಟು ವರ್ಷ ಕಳೆದಿದೆ.
ರೋಹಿತ್ ಮತ್ತು ರಿತಿಕಾ 2015 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರದ್ದೂ ಪ್ರೇಮ ವಿವಾಹವಾಗಿತ್ತು. ತಮ್ಮ ಮ್ಯಾನೇಜರ್ ಆಗಿದ್ದ ರಿತಿಕಾರನ್ನೇ ರೋಹಿತ್ ಪ್ರೀತಿಸಿ ಮದುವೆಯಾಗಿದ್ದರು.
ಇವರಿಬ್ಬರ ಮೊದಲ ಭೇಟಿ ಜಾಹೀರಾತು ಶೂಟಿಂಗ್ ಒಂದರಲ್ಲಿ. ಆ ಶೂಟಿಂಗ್ ಈವೆಂಟ್ ಮ್ಯಾನೇಜರ್ ರಿತಿಕಾ ಆಗಿದ್ದರು. ಆಗಲೇ ರಿತಿಕಾಗೆ ಕ್ರಿಕೆಟಿಗ ಯುವರಾಜ್ ಸಿಂಗ್ ಸಹೋದರ ಸಮಾನರಾಗಿದ್ದರು. ಹೀಗಾಗಿ ರೋಹಿತ್ ಗೆ ಮೊದಲೇ ರಿತಿಕಾ ಮೇಲೆ ಕಣ್ಣು ಹಾಕಬೇಡ ಎಂದು ಎಚ್ಚರಿಕೆ ಕೊಟ್ಟಿದ್ದರಂತೆ.
ಆದರೆ ವಿಧಿಯಾಟ ಹೇಗಿರುತ್ತದೆ ನೋಡಿ. ರೋಹಿತ್ ರ ಕ್ರಿಕೆಟ್, ಜಾಹೀರಾತು ಒಪ್ಪಂದಗಳ ಮ್ಯಾನೇಜರ್ ಆಗಿ ರಿತಿಕಾ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಿತು. ಆರು ವರ್ಷಗಳ ಒಡನಾಟದ ಬಳಿಕ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಈ ಜೋಡಿಗೆ ಮುದ್ದಾದ ಹೆಣ್ಣು ಮಗುವೂ ಇದೆ.