Select Your Language

Notifications

webdunia
webdunia
webdunia
webdunia

ರೋಹಿತ್ ಕೊಂಚ ದಪ್ಪ, ಆದ್ರೆ ಕೊಹ್ಲಿಯಷ್ಟೇ ಫಿಟ್: ಕಂಡೀಷನಿಂಗ್ ಕೋಚ್ ಅಂಕಿತ್

ರೋಹಿತ್ ಕೊಂಚ ದಪ್ಪ, ಆದ್ರೆ ಕೊಹ್ಲಿಯಷ್ಟೇ ಫಿಟ್: ಕಂಡೀಷನಿಂಗ್ ಕೋಚ್ ಅಂಕಿತ್
ಮುಂಬೈ , ಸೋಮವಾರ, 11 ಡಿಸೆಂಬರ್ 2023 (11:29 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾರನ್ನು ಕೆಲವರು ವಡಾ ಪಾವ್ ಎಂದು ಕಿಚಾಯಿಸುವುದು ಇದೆ. ಅವರ ದೇಹ ತೂಕವನ್ನು ನೋಡಿ ಫಿಟ್ನೆಸ್ ಬಗ್ಗೆಯೇ ಅನುಮಾನ ವ್ಯಕ್ತಪಡಿಸುತ್ತಾರೆ.

ರೋಹಿತ್ ದಪ್ಪಗಿದ್ದಾರೆ ಎಂಬ ಕಾರಣ ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡಲ್ಲ. ಅವರು ಫಿಟ್ ಆಗಿಲ್ಲ ಎಂದು ಹಲವರು ಅನುಮಾನ ವ್ಯಕ್ತಪಡಿಸುತ್ತಾರೆ. ಆದರೆ ಇದಕ್ಕೆಲ್ಲಾ ಟೀಂ ಇಂಡಿಯಾ ಸ್ಟ್ರೆಂಗ್ತ್ ಆಂಡ್ ಕಂಡೀಷನಿಂಗ್ ಕೋಚ್ ಅಂಕಿತ್ ಉತ್ತರ ನೀಡಿದ್ದಾರೆ.

ಆಂಗ್ಲ ಮಾಧ‍್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅಂಕಿತ್ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಫಿಟ್ನೆಸ್ ಬಗ್ಗೆ ಮಾತನಾಡಿದ್ದಾರೆ. ಅವರು ಕೊಂಚ ದಪ್ಪ ಆದರೆ ಫಿಟ್ನೆಸ್ ವಿಚಾರದಲ್ಲಿ ಕೊಹ್ಲಿಯಷ್ಟೇ ಫಿಟ್ ಎಂದಿದ್ದಾರೆ.

‘ರೋಹಿತ್ ಶರ್ಮಾರನ್ನು ನೋಡುವಾಗ ಕೊಂಚ ದಪ್ಪ ಎನಿಸುತ್ತಾರೆ. ಆದರೆ ಅವರು ಯೋ ಯೋ ಟೆಸ್ಟ್ ನಲ್ಲಿ ಪ್ರತೀ ಬಾರಿಯೂ ಪಾಸ್ ಆಗುತ್ತಾರೆ. ಅವರು ಫಿಟ್ ಪ್ಲೇಯರ್. ಕೊಹ್ಲಿಯಷ್ಟೇ ಫಿಟ್ ಪ್ಲೇಯರ್. ವಿಶ್ವದ ಫಿಟ್ಟೆಸ್ಟ್ ಕ್ರಿಕೆಟಿಗರಲ್ಲಿ ಅವರೂ ಒಬ್ಬರು’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

India-S Africa T20I: ವಿರಾಟ್ ಕೊಹ್ಲಿ ಜೆರ್ಸಿ ತೊಟ್ಟು ಮೈದಾನದಲ್ಲಿ ಕಾಣಿಸಿಕೊಂಡ ಪುಟಾಣಿ