ಡರ್ಬನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯದ ವೇಳೆ ಮೈದಾನದಲ್ಲಿ ವಿರಾಟ್ ಕೊಹ್ಲಿ ಹೆಸರಿನ ಜೆರ್ಸಿ ತೊಟ್ಟ ಪುಟಾಣಿ ಬಾಲಕ ಎಲ್ಲರ ಗಮನ ಸೆಳೆದಿದ್ದಾರೆ.
ವಿರಾಟ್ ಕೊಹ್ಲಿ ಈ ಟಿ20 ಸರಣಿಯಲ್ಲಿ ಆಡುತ್ತಿಲ್ಲ. ಹಾಗಿದ್ದರೂ ವಿಶ್ವದ ಯಾವುದೇ ಭಾಗದಲ್ಲೂ ಅವರನ್ನು ಆರಾಧಿಸುವ ಅಭಿಮಾನಿಗಳಿದ್ದಾರೆ ಎನ್ನುವುದಕ್ಕೆ ಈ ಪುಟಾಣಿಯೇ ಸಾಕ್ಷಿ.
ಮಳೆಯಿಂದಾಗಿ ಪಂದ್ಯ ತಡವಾಗಿತ್ತು. ಈ ವೇಳೆ ವಿರಾಟ್ ಎಂಬ ಹೆಸರಿರುವ 18 ನಂಬರ್ ಭಾರತೀಯ ಜೆರ್ಸಿ ತೊಟ್ಟ ಪುಟಾಣಿ ಅಭಿಮಾನಿ ಬ್ಯಾಟ್ ಬೀಸಿ ಎಲ್ಲರ ಗಮನ ಸೆಳೆದಿದ್ದಾನೆ. ಆತನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೇ ಫ್ಯಾನ್ಸ್ ಭಾರೀ ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದಾರೆ.
ನೀವು ಕೊಹ್ಲಿಯನ್ನು ಟಿ20 ಕ್ರಿಕೆಟ್ ನಿಂದ ಎಷ್ಟೇ ದೂರವಿಟ್ಟರೂ ಇಂತಹ ಅಭಿಮಾನಿಗಳ ಹೃದಯದಿಂದ ಅವರನ್ನು ದೂರ ಮಾಡಲಾಗದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.