Select Your Language

Notifications

webdunia
webdunia
webdunia
webdunia

INDvsSA T20I: ಭಾರತ-ದ.ಆಫ್ರಿಕಾ ಟಿ20 ಸರಣಿ ಆರಂಭ ಸಮಯ, ನೇರಪ್ರಸಾರ ಮಾಹಿತಿ

INDvsSA T20I: ಭಾರತ-ದ.ಆಫ್ರಿಕಾ ಟಿ20 ಸರಣಿ ಆರಂಭ ಸಮಯ, ನೇರಪ್ರಸಾರ ಮಾಹಿತಿ
ಕಿಂಗ್ಸ್ ಮೇಡ್ , ಭಾನುವಾರ, 10 ಡಿಸೆಂಬರ್ 2023 (09:00 IST)
Photo Courtesy: Twitter
ಕಿಂಗ್ಸ್ ಮೇಡ್: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದಿನಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.

 
ಈ ಸರಣಿಗೆ ಪ್ರಮುಖರ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಯುವ ಪಡೆ ಕಣಕ್ಕಿಳಿಯುತ್ತಿದೆ. ಇತ್ತೀಚೆಗೆಷ್ಟೇ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಗೆದ್ದ ಉತ್ಸಾಹದಲ್ಲಿರುವ ಸೂರ್ಯ ಪಡೆಗೆ ಇದೀಗ ಹೊಸ ಸವಾಲು.

ದ.ಆಫ್ರಿಕಾದಲ್ಲಿ ಇದುವರೆಗೆ ಟೀಂ ಇಂಡಿಯಾ ವೈಟ್ ಬಾಲ್ ಕ್ರಿಕೆಟ್ ನಲ್ಲಿ ಯಶಸ್ಸು ಕಂಡಿದೆ. ಸದ್ಯಕ್ಕೆ ಯುವ ಪಡೆ ಫಾರ್ಮ್ ನಲ್ಲಿರುವುದರಿಂದ ಸರಣಿ ಗೆಲ್ಲುವ ವಿಶ್ವಾದಲ್ಲಿದೆ.

ಇಂದಿನ ಈ ಪಂದ್ಯ ಡರ್ಬನ್ ನ ಕಿಂಗ್ಸ್ ಮೇಡ್ ಮೈದಾನದಲ್ಲಿ ನಡೆಯಲಿದೆ. ಭಾರತೀಯ ಸಮಯದ ಪ್ರಕಾರ ರಾತ್ರಿ 7.30 ಕ್ಕೆ ಪಂದ್ಯ ಆರಂಭವಾಗಲಿದೆ. ಸ್ಪೋರ್ಟ್ 18 ವಾಹಿನಿ ಅಥವಾ ಜಿಯೋ ಸಿನಿಮಾ ಆಪ್ ನಲ್ಲಿ ಎಲ್ಲಾ ಪಂದ್ಯಗಳ ನೇರಪ್ರಸಾರ ವೀಕ್ಷಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

WPL: ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ