Publish Date: Wed, 06 Dec 2023 (09:22 IST)
Updated Date: Wed, 06 Dec 2023 (09:23 IST)
ಮುಂಬೈ: ಭಾರತ ಮತ್ತು ದ.ಆಫ್ರಿಕಾ ನಡುವೆ ಟಿ20, ಏಕದಿನ ಮತ್ತು ಟೆಸ್ಟ್ ಸರಣಿ ನಡೆಯಲಿದ್ದು, ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ಟೀಂ ಇಂಡಿಯಾ ಈಗ ದ.ಆಫ್ರಿಕಾದತ್ತ ಪ್ರಯಾಣ ಬೆಳೆಸಲಿದೆ. ಮೊದಲು ಟಿ20 ಸರಣಿ ನಡೆಯಲಿದ್ದು, ಅದಾದ ಬಳಿಕ ಏಕದಿನ ಮತ್ತು ಟೆಸ್ಟ್ ಸರಣಿ ನಡೆಯುವುದು. ಡಿಸೆಂಬರ್ 10 ರಂದು ಟಿ20 ಸರಣಿ ಮೊದಲ ಪಂದ್ಯ ನಡೆಯಲಿದೆ.
ಟಿ20 ಸರಣಿ ವೇಳಾಪಟ್ಟಿ:
ಡಿಸೆಂಬರ್ 10: ಮೊದಲ ಟಿ20 ಪಂದ್ಯ, ಸ್ಥಳ:ಡರ್ಬನ್
ಡಿ.12: ದ್ವಿತೀಯ ಟಿ20 ಪಂದ್ಯ, ಸ್ಥಳ: ಜಿಬೆಹ್ರಾ
ಡಿ.14: ಮೂರನೇ ಟಿ20 ಪಂದ್ಯ, ಸ್ಥಳ: ಜೊಹಾನ್ಸ್ ಬರ್ಗ್
ಏಕದಿನ ಸರಣಿ ವೇಳಾಪಟ್ಟಿ:
ಡಿ.17 ಮೊದಲ ಏಕದಿನ, ಸ್ಥಳ: ಜೊಹಾನ್ಸ್ ಬರ್ಗ್
ಡಿ.19 ದ್ವಿತೀಯ ಏಕದಿನ, ಸ್ಥಳ: ಜಿಬೆಹ್ರಾ
ಡಿ.21 ಮೂರನೇ ಏಕದಿನ, ಸ್ಥಳ: ಪಾರ್ಲ್
ಟೆಸ್ಟ್ ಸರಣಿ ವೇಳಾಪಟ್ಟಿ:
ಡಿ.26-30, ಮೊದಲ ಟೆಸ್ಟ್ ಪಂದ್ಯ, ಸ್ಥಳ:ಸೆಂಚೂರಿಯನ್
ಜನವರಿ 3-7 ದ್ವಿತೀಯ ಟೆಸ್ಟ್ ಪಂದ್ಯ, ಸ್ಥಳ: ಕೇಪ್ ಟೌನ್