Select Your Language

Notifications

webdunia
webdunia
webdunia
webdunia

ಒಂದೇ ದಿನ ಬರ್ತ್ ಡೇ ಆಚರಿಸಿಕೊಳ್ಳುತ್ತಿರುವ ರವೀಂದ್ರ ಜಡೇಜಾ-ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್

ಒಂದೇ ದಿನ ಬರ್ತ್ ಡೇ ಆಚರಿಸಿಕೊಳ್ಳುತ್ತಿರುವ ರವೀಂದ್ರ ಜಡೇಜಾ-ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್
ಮುಂಬೈ , ಬುಧವಾರ, 6 ಡಿಸೆಂಬರ್ 2023 (09:04 IST)
WD
ಮುಂಬೈ: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾದ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾ ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.

ಟೀಂ ಇಂಡಿಯಾಗೆ ಒಬ್ಬರು ವೇಗದ ಅಸ್ತ್ರವಾದರೆ ಇನ್ನೊಬ್ಬರು ಸ್ಪಿನ್ ಅಸ್ತ್ರ ಹಾಗೂ ಶ್ರೇಯಸ್ ಮಧ‍್ಯಮ ಕ್ರಮಾಂಕದ ಬ್ಯಾಟಿಂಗ್ ದಾಂಡಿಗ. ಮೂವರೂ ಒಂದೇ ದಿನ ಜನ್ಮದಿನ ಹಂಚಿಕೊಳ್ಳುತ್ತಿರುವುದು ವಿಶೇಷ. ಈ ಮೂವರಿಗೂ ಕ್ರಿಕೆಟ್ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರುತ್ತಿದ್ದಾರೆ.

ಜಡೆಜಾ ಇಂದಿಗೆ 35 ವರ್ಷಕ್ಕೆ ಕಾಲಿಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 67 ಪಂದ್ಯವಾಡಿರುವ ಜಡೇಜಾ 2804 ರನ್ ಮತ್ತು 275 ವಿಕೆಟ್ ಕಬಳಿಸಿದ್ದಾರೆ. ಏಕದಿನ ಮಾದರಿಯಲ್ಲಿ 197 ಪಂದ್ಯಗಳಿಂದ 2756 ರನ್ ಮತ್ತು 220 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ 64 ಪಂದ್ಯಗಳಿಂದ 457 ರನ್ ಮತ್ತು 51 ವಿಕೆಟ್ ತಮ್ಮದಾಗಿಸಿದ್ದಾರೆ.

ಇನ್ನು, 30 ನೇ ವರ್ಷಕ್ಕೆ ಕಾಲಿಟ್ಟ ಜಸ್ಪ್ರೀತ್ ಬುಮ್ರಾ ಇದುವರೆಗೆ 30 ಟೆಸ್ಟ್ ಪಂದ್ಯಗಳನ್ನಾಡಿದ್ದು 128 ವಿಕೆಟ್ ಕಬಳಿಸಿದ್ದಾರೆ. ಏಕದಿನಗಳಲ್ಲಿ 89 ಪಂದ್ಯಗಳಿಂದ 148 ವಿಕೆಟ್ ಪಡೆದಿದ್ದಾರೆ. 62 ಟಿ20 ಪಂದ್ಯಗಳಿಂದ 74 ವಿಕೆಟ್ ಪಡೆದ ದಾಖಲೆ ಅವರದ್ದಾಗಿದೆ.

ಶ್ರೇಯಸ್ ಅಯ್ಯರ್ 29 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಒಟ್ಟು 10 ಟೆಸ್ಟ್ ಪಂದ್ಯವಾಡಿರುವ ಅವರು ಒಂದು ಶತಕ ಸೇರಿದಂತೆ 666 ರನ್, ಏಕದಿನಗಳಲ್ಲಿ 58 ಪಂದ್ಯಗಳಿಂದ 5 ಶತಕ ಸೇರಿದಂತೆ 2331 ರನ್, ಟಿ20 ಪಂದ್ಯಗಳಲ್ಲಿ 51 ಪಂದ್ಯಗಳಿಂದ 1104 ರನ್ ಗಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾರ್ದಿಕ್ ಪಾಂಡ್ಯಗೆ 18 ವಾರ ರೆಸ್ಟ್: ಐಪಿಎಲ್ 2024 ಕ್ಕೆ ಹಾಜರ್