Publish Date: Sat, 21 Oct 2023 (17:52 IST)
Updated Date: Sat, 21 Oct 2023 (17:53 IST)
ಧರ್ಮಶಾಲಾ: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಟೀಂ ಇಂಡಿಯಾಗೆ ಆಟಗಾರರ ಗಾಯ ಚಿಂತೆಯ ವಿಷಯವಾಗಿದೆ.
ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕಾಲಿಗೆ ಗಾಯ ಮಾಡಿಕೊಂಡು ನಾಳೆ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ.
ಇದರ ಬೆನ್ನಲ್ಲೇ ಮತ್ತೊಬ್ಬ ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯದ ಸುದ್ದಿ ಕೇಳಿಬರುತ್ತಿದೆ. ಜಡೇಜಾಗೆ ಮತ್ತೆ ಮೊಣಕಾಲಿನ ನೋವು ಮರುಕಳಿಸಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲೇ ಜಡೇಜಾ ಮೊಣಕಾಲಿಗೆ ಐಸ್ ಪ್ಯಾಕ್ ಕಟ್ಟಿಕೊಂಡು ಪೆವಿಲಿಯನ್ ನಲ್ಲಿ ಕೂತಿರುವುದು ಗಮನಕ್ಕೆ ಬಂದಿತ್ತು. ಆದರೆ ಸದ್ಯಕ್ಕೆ ಅವರು ಆಡಲಿದ್ದಾರೆ. ಆದರೆ ಅವರನ್ನು ಎಚ್ಚರಿಕೆಯಿಂದ ಬಳಸಿಕೊಳ್ಳಬೇಕಾದ ಅನಿವಾರ್ಯತೆ ತಂಡಕ್ಕಿದೆ.
2022 ರ ಟಿ20 ವಿಶ್ವಕಪ್ ವೇಳೆ ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಜಡೇಜಾ ಟೂರ್ನಿಯನ್ನು ಮಿಸ್ ಮಾಡಿಕೊಂಡಿದ್ದರು. ಇದೀಗ ಏಕದಿನ ವಿಶ್ವಕಪ್ ನಲ್ಲಿ ಅವರು ಟೂರ್ನಿಯುದ್ದಕ್ಕೂ ಸುರಕ್ಷಿತವಾಗಿರುವುದು ಮುಖ್ಯವಾಗಿದೆ.