Select Your Language

Notifications

webdunia
webdunia
webdunia
webdunia

ಚಿನ್ನಸ್ವಾಮಿಯಲ್ಲಿ ರನ್ ಹೊಳೆ: ಡೇವಿಡ್ ವಾರ್ನರ್ ಗೆ ಎದ್ದು ನಿಂತು ಗೌರವ ಸಲ್ಲಿಸಿದ ಪ್ರೇಕ್ಷಕರು

ಚಿನ್ನಸ್ವಾಮಿಯಲ್ಲಿ ರನ್ ಹೊಳೆ: ಡೇವಿಡ್ ವಾರ್ನರ್ ಗೆ ಎದ್ದು ನಿಂತು ಗೌರವ ಸಲ್ಲಿಸಿದ ಪ್ರೇಕ್ಷಕರು
ಬೆಂಗಳೂರು , ಶುಕ್ರವಾರ, 20 ಅಕ್ಟೋಬರ್ 2023 (19:21 IST)
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ರನ್ ಹೊಳೆಯೇ ಹರಿದುಬರುತ್ತಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ ಗಳಿಸಿತು.  ಆಸೀಸ್ ಆರಂಭಿಕ ಡೇವಿಡ್ ವಾರ್ನರ್ 124 ಎಸೆತಗಳಲ್ಲಿ 9 ಸಿಕ್ಸರ್ ಸಹಿತ163 ರನ್ ಚಚ್ಚಿದರು. ಅವರ ಈ ಬಿರುಸಿನ ಇನಿಂಗ್ಸ್ ಗೆ ಚಿನ್ನಸ್ವಾಮಿ ಮೈದಾನದ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ. ಅವರಿಗೆ ತಕ್ಕ ಸಾಥ್ ನೀಡಿದ್ದ ಮಿಚೆಲ್ ಮಾರ್ಷ್ 121 ರನ್ ಗಳಿಸಿದರು.

ಇಬ್ಬರೂ ಮೊದಲ ವಿಕೆಟ್ ಗೆ 259 ರನ್ ಗಳ ಜೊತೆಯಾಟವಾಡಿದರು. ಪಾಕ್ ಪರ ಶಾಹಿನ್ ಅಫ್ರಿದಿ 5 ವಿಕೆಟ್ ಕಬಳಿಸಿದರು. ಇದೀಗ ಬ್ಯಾಟಿಂಗ್ ಆರಂಭಿಸಿರುವ ಪಾಕ್ ವಿಕೆಟ್ ನಷ್ಟವಿಲ್ಲದೇ 62 ರನ್ ಗಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಶಾಲಾಗೆ ಬಂದಿಳಿದ ಟೀಂ ಇಂಡಿಯಾ: ಮುಂದಿನ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಇಲ್ಲ