ಪುಣೆ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಬೌಲರ್ ಗಳ ನಿಯಂತ್ರಿತ ಬೌಲಿಂಗ್ ನಿಂದಾಗಿ ಬಾಂಗ್ಲಾದೇಶ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತು.
ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಬಾಂಗ್ಲಾ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ ಗೆ ತನ್ಸಿದ್ ಹಸನ್ (51), ಲಿಟನ್ ದಾಸ್ (66) 93 ರನ್ ಗಳ ಜೊತೆಯಾಟವಾಡಿದರು. ಈ ಜೋಡಿ ಆರಂಭದ 15 ಓವರ್ ಗಳಲ್ಲಿಯೇ 90 ಪ್ಲಸ್ ರನ್ ಗಳಿಸಿದಾಗ ಬಾಂಗ್ಲಾ ದೊಡ್ಡ ಮೊತ್ತ ಗಳಿಸುವ ವಿಶ್ವಾಸದಲ್ಲಿತ್ತು.
ಆದರೆ ನಂತರ ರವೀಂದ್ರ ಜಡೇಜಾ, ಕುಲದೀಪ್ ಯಾದವ್ ಜೋಡಿ ರನ್ ನಿಯಂತ್ರಣಕ್ಕೆ ಮುಂದಾಯಿತು. ಈ ನಡುವೆ ವಿಕೆಟ್ ಕೀಪರ್ ಕೆಎಲ್ ರಾಹುಲ್, ಜಡೇಜಾ ಹಿಡಿದ ಎರಡು ಅದ್ಭುತ ಕ್ಯಾಚ್ ಗಳು ಗಮನ ಸೆಳೆದವು. ಟೀಂ ಇಂಡಿಯಾ ಬೌಲರ್ ಗಳು ಮುಂದಿನ 20 ಓವರ್ ಗಳಲ್ಲಿ ಅದ್ಭುತವಾಗಿ ರನ್ ಹೊಳೆಗೆ ಕಡಿವಾಣ ಹಾಕಿದರು. ಇದರಿಂದಾಗಿ ಬಾಂಗ್ಲಾ ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಲಷ್ಟೇ ಶಕ್ತವಾಯಿತು.